ಕೋವಿಡ್-19 ಸೋಂಕಿತರ ಸಂಖ್ಯೆ ದಿನೇ ದಿನೇ ಗಾಬರಿಯಾಗುವ ಮಟ್ಟದಲ್ಲಿ ಏರಿಕೆಯಾಗುತ್ತಿರುವಂತೆಯೇ ಸೆನ್ಸೆಕ್ಸ್‌ನಲ್ಲಿ ಒಂದೇ ದಿನ 1,708 ಪಾಯಿಂಟ್‌ಗಳ ಕುಸಿತ ಕಂಡಿದ್ದು, ನಿಫ್ಟಿ 14,350 ಅಂಕಗಳ ಮಟ್ಟಕ್ಕೆ ಇಳಿದಿರುವ ಕಾರಣ ಹೂಡಿಕೆದಾರರ ವಲಯದಲ್ಲಿ ಭಾರೀ ಆತಂಕ ಸೃಷ್ಟಿಯಾಗಿದೆ.
ಫೆಬ್ರವರಿ 26ರಿಂದ ದಾಖಲಾದ ಅತಿ ದೊಡ್ಡ ಕುಸಿತ ದಾಖಲಿಸಿದ ಬಿಎಸ್‌ಇ ಸೆನ್ಸೆಕ್ಸ್ 3.4% ಕುಸಿತ ಕಂಡು ಸೋಮವಾರದ ಅಂತ್ಯಕ್ಕೆ 47,883.38 ಅಂಕಗಳೊಂದಿಗೆ ದಿನದ ವಹಿವಾಟು ಮುಗಿಸಿದೆ. ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯು 524.05 ಅಂಶಗಳ ಕುಸಿತ ಕಂಡಿದೆ. ಈ ಬೆಳವಣಿಗೆಯಿಂದ ಹೂಡಿಕೆದಾರರಿಗೆ 8.77 ಲಕ್ಷ ಕೋಟಿ ರೂ.ಗಳ ನಷ್ಟವಾಗಿದೆ.
ಬಿಎಸ್‌ಇ ಪಟ್ಟಿಯಲ್ಲಿರುವ ಸ್ಟಾಕ್‌ಗಳ ಮಾರುಕಟ್ಟೆ ಮೌಲ್ಯದಲ್ಲಿ ಒಟ್ಟಾರೆ 200.85 ಲಕ್ಷ ಕೋಟಿ ರೂ.ಗಳ ಕುಸಿತ ಕಂಡಿದ್ದು, ಇದರ ಪರಿಣಾಮ ರೂಪಾಯಿ ಬೆಲೆಯಲ್ಲಿ 26 ಪೈಸೆಯಷ್ಟು ಕುಸಿತವಾಗಿ ಅಮೆರಿಕ ಡಾಲರ್ 74.98 ರೂಪಾಯ ಮಟ್ಟ ತಲುಪಿದೆ.
ಸೋಮವಾರದ ಈ ನಕಾರಾತ್ಮಕ ಬೆಳವಣಿಗೆ ಮೀಮರ್‌ಗಳಿಗೆ ಸಖತ್ ಕಂಟೆಂಟ್ ಮಾಡಲು ಪ್ರೇರಣೆ ಕೊಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಥರಾವರಿ ಮೀಮ್‌ಗಳು ಸದ್ದು ಮಾಡುತ್ತಿವೆ.