
ದಾವಣಗೆರೆ: ನೋಂದಣಿಯಾಗದೇ ಉಳಿದ ಭಾರತ್ ಸ್ಟೇಜ್ 4 ವಾಹನಗಳ ನೋಂದಣಿಗೆ ಜನವರಿ 16 ರ ವರೆಗೆ ಅವಕಾಶ ನೀಡಲಾಗಿದೆ.
ಲಾಕ್ಡೌನ್ ಅವಧಿಗೆ ಮುಂಚೆ ಅಧಿಕೃತ ಮಾರಾಟಗಾರರಿಂದ ಮಾರಾಟವಾಗಿ, ತಾತ್ಕಾಲಿಕ ನೋದಣಿಯನ್ನು ಹೊಂದಿ, ಇ-ವಾಹನ್ ಪೋರ್ಟ್ನಲ್ಲಿ ನಮೂದಿತವಾಗಿ ಜಿಲ್ಲೆಯಲ್ಲಿ ನೋಂದಣಿಯಾಗದೆ ಉಳಿದಿರಿರುವ ಭಾರತ್ ಸ್ಟೇಜ್-4 ಮಾಪನದ ಎಲ್ಲಾ ವಾಹನಗಳನ್ನು ಜ.16 ರವರೆಗೆ ನಿಯಮಾನುಸಾರ ನೋಂದಣಿ ಮಾಡಲಾಗುವುದು.
ಸರ್ವೋಚ್ಛ ನ್ಯಾಯಲಯದ ಆದೇಶದ ಹಿನ್ನಲೆಯಲ್ಲಿ ಸಾರಿಗೆ ಆಯುಕ್ತರು ಆದೇಶ ಹೊರಡಿಸಿದ್ದು, ಅದರಂತೆ ಸಾರ್ವಜನಿಕರು ವಾಹನಗಳ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ. ತದನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.