alex Certify BREAKING: ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್: ಭಾರಿ ಸುಧಾರಣೆಯೊಂದಿಗೆ 40 ನೇ ಸ್ಥಾನಕ್ಕೇರಿದ ಭಾರತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್: ಭಾರಿ ಸುಧಾರಣೆಯೊಂದಿಗೆ 40 ನೇ ಸ್ಥಾನಕ್ಕೇರಿದ ಭಾರತ

ಗ್ಲೋಬಲ್ ಇನ್ನೋವೇಶನ್ ಇಂಡೆಕ್ಸ್ -2022 ಪಟ್ಟಿ ಪ್ರಕಟಿಸಲಾಗಿದೆ. ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ 40ನೇ ಸ್ಥಾನಕ್ಕೆ ಏರಿಕೆಯಾಗಿದೆ.

ಈ ವರ್ಷ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ 40ನೇ ಸ್ಥಾನಕ್ಕೆ ಏರಿಕೆಯಾಗಿದೆ. 20015 ರಲ್ಲಿ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ 81 ನೇ ಸ್ಥಾನದಲ್ಲಿ ಇತ್ತು. ಭಾರತ ತಂತ್ರಜ್ಞಾನ ಕ್ಷೇತ್ರದ ಸಾಧನೆಯ ಅಂಶಗಳ ಪರಿಗಣನೆ ಮಾಡಿ ಈ ಸ್ಥಾನ ನೀಡಲಾಗಿದೆ.

ಹೊಸ ಆವಿಷ್ಕಾರ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಉತ್ತಮ ಸಾಧನೆ ತೋರಿದ್ದು, ಇತರೆ ಅಂಶಗಳನ್ನು ಪರಿಷ್ಕರಿಸಿ ಆವಿಷ್ಕಾರ ಸೂಚ್ಯಂಕ ನಿಗದಿ ಮಾಡಲಾಗಿದೆ. ಸ್ಟಾರ್ಟ್‌ ಅಪ್‌ ಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವಲ್ಲಿ ಮತ್ತು ನಾವೀನ್ಯತೆ ಉತ್ತೇಜಿಸುವಲ್ಲಿ ಭಾರತ ನಿರಂತರವಾಗಿ ಸುಧಾರಿಸುತ್ತಿದೆ ಎಂದು ಸೂಚ್ಯಂಕ ತೋರಿಸುತ್ತದೆ.

ಸ್ಟಾರ್ಟಪ್‌ ಗಳಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸಲು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸಂಶೋಧನೆಗೆ ಒತ್ತು ನೀಡುವುದರಿಂದ ಈ ಸುಧಾರಣೆಯಾಗಿದೆ. ಈ ವರದಿಯು ಪ್ರಪಂಚದಾದ್ಯಂತದ ದೇಶಗಳು ತಮ್ಮ ಆವಿಷ್ಕಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಸಾಮಾಜಿಕ, ಆರ್ಥಿಕ ಸವಾಲುಗಳು ಮತ್ತು ಬದಲಾವಣೆಗಳಿಗೆ ಹೊಸ ಆಲೋಚನೆಗಳು, ತಂತ್ರಗಳನ್ನು ಅಳವಡಿಸುವುದು ಇದರ ಮೂಲ ಉದ್ದೇಶವಾಗಿದೆ. ಸರ್ಕಾರಗಳು GII ವರದಿಯನ್ನು ತಮ್ಮ ನೀತಿಗಳನ್ನು ಸುಧಾರಿಸುವ ಮಾರ್ಗವೆಂದು ಪರಿಗಣಿಸುತ್ತವೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...