
ನವದೆಹಲಿ: ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ನಿನ್ನೆಯಷ್ಟೇ ಕೊವಿಶೀಲ್ಡ್ ಲಸಿಕೆಯ ದರವನ್ನು ಇಳಿಕೆ ಮಾಡಿದ್ದು, ಇಂದು ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆ ದರವನ್ನು ಇಳಿಕೆ ಮಾಡಿದೆ.
1 ಡೋಸ್ ಗೆ 600 ರೂಪಾಯಿ ಇದ್ದ ದರವನ್ನು 400 ರೂಪಾಯಿಗೆ ಇಳಿಕೆ ಮಾಡಲಾಗಿದೆ. ಭಾರತ್ ಬಯೋಟೆಕ್ ನಿಂದ ಕೊರೋನಾ ಲಸಿಕೆ ದರವನ್ನು ಇಳಿಕೆ ಮಾಡಲಾಗಿದ್ದು, ರಾಜ್ಯಸರ್ಕಾರಗಳಿಗೆ ಕೊವ್ಯಾಕ್ಸಿನ್ ಒಂದು ಡೋಸ್ಟ್ ಗೆ 400 ರೂಪಾಯಿಗೆ ಲಭ್ಯವಾಗಲಿದೆ.