ಬೆಂಗಳೂರು: 2021 – 22ರ ಬಜೆಟ್ನಲ್ಲಿ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸುವ ಮೂಲಕ ಕಡಿಮೆಯಾಗಿರುವ ಆದಾಯ ಹೆಚ್ಚಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ.
ಹಣಕಾಸು ಖಾತೆ ಹೊಂದಿರುವ ಸಿಎಂ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡುವುದರೊಂದಿಗೆ ಆದಾಯ ಹೆಚ್ಚಳಕ್ಕೆ ಚಿಂತನೆ ನಡೆಸಿದ್ದಾರೆ.
ತಯಾರಕರು ಮತ್ತು ವ್ಯಾಪಾರಿಗಳ ಆದಾಯದ ಪಾಲು ಹೆಚ್ಚಿಸುವ ಒತ್ತಡದಲ್ಲಿದ್ದು, ತಯಾರಕರು ಪ್ರತಿ ಸ್ಲ್ಯಾಬ್ ಗೆ ಕನಿಷ್ಟ 100 ರೂ. ಪರಿಷ್ಕರಿಸಲು ಬಯಸಿದ್ದಾರೆ. ಚಿಲ್ಲರೆ ವ್ಯಾಪಾರಿಗಳು ಮಾರಾಟದ ಎಂ.ಆರ್.ಪಿ.ಯಲ್ಲಿ ಮಾರಾಟ ಕಮಿಷನ್ ಶೇಕಡ 10 ರಿಂದ 20 ರಷ್ಟು ಹೆಚ್ಚಳಕ್ಕೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.