ಕೊರೊನಾ ಮಹಾಮಾರಿ ವಕ್ಕರಿಸಿರುವ ಕಾರಣ ಎಲ್ಲರೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತಿಂಗಳ ಸಂಬಳದಲ್ಲಿ ಹೇಗೋ ಜೀವನ ನಡೆಯುತ್ತಿದೆ, ಆದ್ರೆ ನಯಾಪೈಸೆ ಉಳಿತಾಯ ಮಾಡಲು ಸಾಧ್ಯವಾಗೋಲ್ಲ ಅನ್ನೋದು ಹಲವರ ಅಳಲು. ಹೆಚ್ಚುವರಿ ಆದಾಯ ಗಳಿಸಲು ಏನನ್ನಾದ್ರೂ ಮಾಡೋಣ ಅಂದುಕೊಳ್ತಾರೆ. ತಿಂಗಳ ಸಂಬಳ ಹೊರತುಪಡಿಸಿ, ಹಣ ಗಳಿಸಲು ಹಲವು ಮಾರ್ಗಗಳಿವೆ.
ನಿಮ್ಮ ಉದ್ಯೋಗದ ಜೊತೆಜೊತೆಗೆ ಇನ್ಷೂರೆನ್ಸ್ ಏಜೆಂಟ್ ಆಗಿ ಕೂಡ ಕೆಲಸ ಮಾಡಬಹುದು. ಇನ್ಷೂರೆನ್ಸ್ ಪಾಲಿಸಿ ಮಾರಾಟದಿಂದ ನಿಮಗೆ ಕಮಿಷನ್ ಸಿಗುತ್ತದೆ. ಕಮಿಷನ್ ಪ್ರಮಾಣ ಕೂಡ ಹೆಚ್ಚಾಗಿರುವುದರಿಂದ ನಿಮ್ಮ ಬ್ಯಾಂಕ್ ಖಾತೆ ಹಿಗ್ಗೋದ್ರಲ್ಲಿ ಅನುಮಾನವೇ ಇಲ್ಲ.
ಇಂದು ಭಾರತೀಯ ಜೀವ ವಿಮಾ ನಿಗಮದ ಜೊತೆ ಹತ್ತಾರು ಖಾಸಗಿ ವಿಮಾ ಕಂಪನಿಗಳೂ ಇವೆ. ಹಣ ಗಳಿಕೆ ಜೊತೆಜೊತೆಗೆ ಜೀವವಿಮಾ ಏಜೆಂಟ್ ಗಳಿಗೆ ಇನ್ನೂ ಕೆಲವೊಂದು ಲಾಭಗಳಿವೆ.
ಇದೊಂದು ಆರಾಮದಾಯಕ ಕೆಲಸ. ಪಾರ್ಟ್ ಟೈಂ ಅಥವಾ ಫುಲ್ ಟೈಮ್ ಕೆಲಸವಾಗಿಯೂ ಇದನ್ನು ಮಾಡಬಹುದು. ನಿವೃತ್ತಿ ನಂತರವೂ ಲಾಭಗಳಿವೆ. ಗ್ರಾಚ್ಯುಯಿಟಿ ದೊರೆಯುತ್ತದೆ. ನಿಧನದ ನಂತರವೂ ಕಮಿಷನ್ ನವೀಕರಣ ಆಗುತ್ತಲೇ ಇರುತ್ತದೆ. ಹಾಗಾಗಿ ಹೆಚ್ಚುವರಿ ಹಣ ಗಳಿಕೆಗೆ ಇದೊಂದು ಉತ್ತಮ ಅವಕಾಶ.