
ಪೆಟ್ರೋಲ್ – ಡಿಸೇಲ್ ಬೆಲೆ ಏರಿಕೆ ನಂತ್ರ ಜನರು ಎಲೆಕ್ಟ್ರಿಕ್ ವಾಹನದತ್ತ ಮುಖ ಮಾಡ್ತಿದ್ದಾರೆ. ಕಂಪನಿಗಳು ಕೂಡ, ಎಲೆಕ್ಟ್ರಿಕ್ ವಾಹನಕ್ಕೆ ಹೆಚ್ಚಿನ ಮಹತ್ವ ನೀಡ್ತಿವೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಸುದ್ದಿ ಮಾಡ್ತಿದೆ. ಇದ್ರ ಮಧ್ಯೆ ಬೂಮ್ ಮೋಟಾರ್ಸ್ ತನ್ನ ಹೊಸ ಕಾರ್ಬೆಟ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದು ಭಾರತದ ಅತ್ಯಂತ ಬಾಳಿಕೆ ಬರುವ ಸ್ಕೂಟರ್ ಎಂದು ಕಂಪನಿ ಹೇಳಿಕೊಂಡಿದೆ.
ಬ್ಯಾಟರಿ ಚಾಲಿತ ಸ್ಕೂಟರ್‌ಗಳಿಗೆ ಬೂಮ್ ಸ್ಕೂಟರ್ ಟಕ್ಕರ್ ನೀಡಲಿದೆ. ನವೆಂಬರ್ 12 ಅಂದ್ರೆ ಇಂದಿನಿಂದ ಗ್ರಾಹಕರು, ಕಾರ್ಬೆಟ್ ಇ-ಸ್ಕೂಟರ್ ಬುಕ್ ಮಾಡಬಹುದು. ಬೂಮ್ ಮೋಟಾರ್ಸ್ನ ಇ-ಸ್ಕೂಟರ್ ಓಲಾ ಹಾಗೂ ಎಥರ್ ಇವಿಗೆ ಸ್ಪರ್ಧೆ ನೀಡಲಿದೆ.
ಬೂಮ್ ಮೋಟಾರ್ಸ್ ಇ-ಸ್ಕೂಟರ್‌ನಲ್ಲಿ 2.3 kWh ಬ್ಯಾಟರಿ ನೀಡಲಾಗಿದೆ. ಇದು ಪೂರ್ಣ ಚಾರ್ಜ್ ನಂತ್ರ 200 ಕಿಲೋಮೀಟರ್ ದೂರ ಕ್ರಮಿಸಲಿದೆ. ಗ್ರಾಹಕರು ಬ್ಯಾಟರಿ ಶಕ್ತಿಯನ್ನು 4.6 kWh ಗೆ ದ್ವಿಗುಣಗೊಳಿಸುವ ಆಯ್ಕೆ ಕೂಡ ಇದೆ. ಇ-ಸ್ಕೂಟರ್‌ನ ಗರಿಷ್ಠ ವೇಗ ಗಂಟೆಗೆ 75 ಕಿಲೋಮೀಟರ್.
ಕಾರ್ಬೆಟ್ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ 89,999 ರೂಪಾಯಿ. ಗ್ರಾಹಕರು ಕಾರ್ಬೆಟ್ ಇ-ಸ್ಕೂಟರನ್ನು 5 ವರ್ಷಗಳ ಸುಲಭ ಕಂತುಗಳ ಇಎಂಐ ಮೂಲಕ ಖರೀದಿಸಬಹುದು. ಇಎಂಐ ಮೂಲಕ ಸಿಗ್ತಿರುವ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಗ್ರಾಹಕರು ತಿಂಗಳಿಗೆ ಕನಿಷ್ಠ 1,699 ರೂಪಾಯಿ ಪಾವತಿಸಿ ಈ ಸ್ಕೂಟರ್ ಮನೆಗೆ ತರಬಹುದು.
ಬ್ಯಾಟರಿಯನ್ನು ಹೊರತೆಗೆದು ಬೇಕಾದಲ್ಲಿ ಚಾರ್ಜ್ ಮಾಡುವ ಸೌಭ್ಯವನ್ನು ನೀಡಲಾಗಿದೆ. ಬೂಮ್ ಮೋಟಾರ್ಸ್ ಇ-ಸ್ಕೂಟರ್ ಅನ್ನು ಪೋರ್ಟಬಲ್ ಚಾರ್ಜರ್‌ನೊಂದಿಗೆ ನೀಡ್ತಿದೆ.