ಎಲ್ಪಿಜಿ ಸಿಲಿಂಡರ್ ಬೆಲೆ ಈ ತಿಂಗಳು 10 ರೂಪಾಯಿ ಇಳಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಬೆಲೆ ಇಳಿಯುತ್ತಾ ಎಂಬ ಪ್ರಶ್ನೆಗೆ ಉತ್ತರವಿಲ್ಲ. ಈ ಮಧ್ಯೆ ಗ್ರಾಹಕರಿಗೆ ನೆಮ್ಮದಿ ಸುದ್ದಿಯೊಂದು ಸಿಕ್ಕಿದೆ. ಸಿಲಿಂಡರ್ ಗ್ರಾಹಕರು ವಾಟ್ಸಾಪ್ ಮೂಲಕವೇ ಸಿಲಿಂಡರ್ ಬುಕ್ ಮಾಡಬಹುದು.
ತೈಲ ಕಂಪನಿಗಳು ವಾಟ್ಸಾಪ್ ಮೂಲಕ ಎಲ್‌ಪಿಜಿ ಸಿಲಿಂಡರ್ ಬುಕ್ ಮಾಡಲು ನಂಬರ್ ನೀಡಿವೆ. REFILL ಎಂದು ಟೈಪ್ ಮಾಡುವ ಮೂಲಕ ನೀವು ಕಂಪನಿ ವಾಟ್ಸಾಪ್ ನಂಬರ್ ಗೆ ಕಳುಹಿಸಬೇಕು. ಇಂಡೇನ್ ಮತ್ತು ಎಚ್‌ಪಿ ಗ್ಯಾಸ್ ಎರಡೂ ವಾಟ್ಸಾಪ್ ಮೂಲಕ ಎಲ್‌ಪಿಜಿ ಬುಕಿಂಗ್ ಸೇವೆಯನ್ನು ನೀಡುತ್ತವೆ.
ಇಂಡೇನ್ ಗ್ರಾಹಕರು 7718955555 ಗೆ ಕರೆ ಮಾಡಿ ತಮ್ಮ ಸಿಲಿಂಡರ್‌ಗಳನ್ನು ಕಾಯ್ದಿರಿಸಬಹುದು. ವಾಟ್ಸಾಪ್ ನಲ್ಲಿ ಗ್ಯಾಸ್ ಬುಕ್ ಮಾಡಲು ಬಯಸಿದರೆ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 7588888824 ಗೆ REFILL ಎಂದು ಟೈಪ್ ಮಾಡಿ ಸಂದೇಶ ಕಳುಹಿಸಬೇಕು. ಮೊಬೈಲ್ ನಲ್ಲಿ ಈ ನಂಬರ್ ಸೇವ್ ಮಾಡಿಕೊಳ್ಳಿ. ಬುಕ್ಕಿಂಗ್ ಸೇರಿದಂತೆ ಎಲ್ಲ ಮಾಹಿತಿ ನಿಮಗೆ ಈ ನಂಬರ್ ನಿಂದ ಸಿಗುತ್ತದೆ.
ಬುಕಿಂಗ್ ಮಾಡಿದ ನಂತರ ವಾಟ್ಸಾಪ್ ನಲ್ಲಿನ ಸ್ಥಿತಿ ಪರಿಶೀಲಿಸಬಹುದು. ನೋಂದಾಯಿತ ಮೊಬೈಲ್ ಸಂಖ್ಯೆಯಿಂದ STATUS # ಎಂದು ಟೈಪ್ ಮಾಡಬೇಕು. ಬುಕಿಂಗ್ ನಂತರ ಬರುವ ಆದೇಶ ಸಂಖ್ಯೆಯನ್ನು ನಮೂದಿಸಬೇಕು. ಬುಕಿಂಗ್ ಸಂಖ್ಯೆ 12345 ಎಂದಾಗಿದ್ದರೆ STATUS # 12345 ಟೈಪ್ ಮಾಡಿ 7588888824 ವಾಟ್ಸಾಪ್ ಸಂಖ್ಯೆಗೆ ಕಳುಹಿಸಬೇಕು.
ಎಚ್‌ಪಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಲು ಬಯಸಿದರೆ 9222201122 ಸಂಖ್ಯೆಗೆ ವಾಟ್ಸಾಪ್ ಮಾಡಬೇಕು. ಈ ನಂಬರ್ ಗೆ BOOK ಎಂದು ಟೈಪ್ ಮಾಡಿ ಅದನ್ನು ಈ ಸಂಖ್ಯೆಗೆ ಕಳುಹಿಸಬೇಕು. ಎಲ್‌ಪಿಜಿ ಕೋಟಾ, ಎಲ್‌ಪಿಜಿ ಐಡಿ, ಎಲ್‌ಪಿಜಿ ಸಬ್ಸಿಡಿ ಇತ್ಯಾದಿಗಳ ಬಗ್ಗೆಯೂ ಇದ್ರಲ್ಲಿ ತಿಳಿಯಬಹುದು.