ನವದೆಹಲಿ: ಅಮೆಜಾನ್ ಕಂಪನಿಯಿಂದ ಭಾರತದಲ್ಲಿರುವ ನೌಕರರಿಗೆ ಗರಿಷ್ಠ 6300 ರೂಪಾಯಿಯವರೆಗೆ ವಿಶೇಷ ಬೋನಸ್ ನೀಡಲಾಗುವುದು.
ವಿಶೇಷ ಮನ್ನಣೆಯ ಬೋನಸ್ ಅನ್ನು ಅಮೆಜಾನ್ ಕಂಪನಿ ಬೇರೆ ದೇಶಗಳಲ್ಲಿ ನೌಕರರಿಗೆ ನೀಡುತ್ತಿದೆ. ಅದೇ ರೀತಿ ಭಾರತದಲ್ಲಿ ಅಮೆಜಾನ್ ನೌಕರರಿಗೆ 6300 ರೂಪಾಯಿಯವರೆಗೆ ವಿಶೇಷ ಮನ್ನಣೆ ಬೋನಸ್ ನೀಡಲಾಗುವುದು.
ಅಮೆಜಾನ್ ಕಂಪನಿ ಲಾಭ ಮಾಡಿಕೊಳ್ಳುತ್ತಿರುವ ಬಗ್ಗೆ ಜಾಗತಿಕ ಮಟ್ಟದಲ್ಲಿ ಅಭಿಯಾನ ನಡೆದಿದ್ದು, ಇದೇ ಹೊತ್ತಲ್ಲಿ ಬೋನಸ್ ಘೋಷಣೆ ಮಾಡಲಾಗಿದೆ. ಅಕ್ಟೋಬರ್ 16 ರಿಂದ ನವೆಂಬರ್ 13 ರವರೆಗೆ ಕಂಪನಿಯಲ್ಲಿ ಪೂರ್ಣಾವಧಿ ನೌಕರರಾಗಿದ್ದವರಿಗೆ 6300 ರೂ., ಅರೆಕಾಲಿಕ ನೌಕರರಿಗೆ 3150 ವಿಶೇಷ ಬೋನಸ್ ನೀಡಲಾಗುವುದು ಎಂದು ಹೇಳಲಾಗಿದೆ.