ನವದೆಹಲಿ: ಪ್ರಸಿದ್ಧ ಆಟೊಮೊಬೈಲ್ ಕಂಪನಿ ಬಿಎಂಡಬ್ಲ್ಯು ಮೋಟರ್ಸ್ ಇಂಡಿಯಾ ಆರ್ -18 ಕ್ರೂಸರ್ ಐಶಾರಾಮಿ ಬೈಕ್ ನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಹಾರ್ಲೆ ಡೇವಿಡ್ ಸನ್ ಫ್ಯಾಟ್ ಬಾಯ್ ಮತ್ತು ಟ್ರಂಪ್ ರಾಕೆಟ್ 3 ಜಿಟಿ ಬೈಕ್ ಗಳಿಗೆ ಪ್ರತಿಸ್ಪರ್ಧಿಯಾಗಿ ಆರ್ 18 ಕ್ರೂಸರ್ ಮಾರುಕಟ್ಟೆಗೆ ಶನಿವಾರ ಇಳಿದಿದೆ. ಫಸ್ಟ್ ಎಡಿಶನ್ ಬೈಕ್ ನ ಎಕ್ಸ್ ಶೋ ರೂಂ ಮೌಲ್ಯ 20 ರಿಂದ 21 ಲಕ್ಷ ರೂ. ಆಗಲಿದೆ. 1 ಲಕ್ಷ ರೂ. ಮುಂಗಡ ಪಡೆದು ಏಪ್ರಿಲ್ ನಿಂದಲೇ ಬುಕ್ಕಿಂಗ್ ಪ್ರಾರಂಭಿಸಲಾಗಿತ್ತು. ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.
1802 ಸಿಸಿ ಏರ್/ಆಯ್ಲ್ ಕೂಲಿಂಗ್ ಇಂಜಿನ್ ಬೈಕ್ ನ ಪ್ರಮುಖ ಹೈಲೈಟ್. ರೇನ್, ರೋಲ್ ಹಾಗೂ ರಾಕ್ ಎಂಬ ಅಟೊಮೆಟಿಕ್ ಸ್ಟೆಬಿಲಿಟಿ ಕಂಟ್ರೋಲ್ (ಎ.ಎಸ್.ಸಿ.) ವ್ಯವಸ್ಥೆ ಹೊಂದಿದೆ. ಅಲ್ಲದೆ ರಿವರ್ಸ್ ಗೇರ್ ಕೂಡ ಇದೆ. 345 ಕೆಜಿ ತೂಕವಿದೆ.