ಬೆಂಗಳೂರು: 3 ಲಕ್ಷ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೆ ಉಚಿತವಾಗಿ ಬಸ್ ಪಾಸ್ ವಿತರಿಸಲು ಬಿಎಂಟಿಸಿ ಮುಂದಾಗಿದೆ.
ವನಿತಾ ಸಂಗಾತಿ ಯೋಜನೆ ಅಡಿಯಲ್ಲಿ ಉಚಿತವಾಗಿ ಪಾಸ್ ಗಳನ್ನು ವಿತರಿಸಲಾಗುತ್ತದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್ ನಲ್ಲಿ ಯೋಜನೆಯನ್ನು ಘೋಷಿಸಿದ್ದರು.
ವೆಚ್ಚದಲ್ಲಿ ಶೇಕಡ 40 ರಷ್ಟು ಹಣವನ್ನು ಗಾರ್ಮೆಂಟ್ಸ್ ಮಾಲೀಕರು ಭರಿಸಲಿದ್ದಾರೆ. ಶೇ. 40 ರಷ್ಟು ಹಣವನ್ನು ರಾಜ್ಯ ಸರ್ಕಾರವ ಭರಿಸಲಿದ್ದು, ಉಳಿದ ಶೇ. 20 ರಷ್ಟು ಹಣವನ್ನು ಬಿಎಂಟಿಸಿ ಭರಿಸಲಿತ್ತದೆ. ಗಾರ್ಮೆಂಟ್ಸ್ ಮಹಿಳೆಯರಿಗೆ ಉಚಿತವಾಗಿ ಬಸ್ ಪಾಸ್ ನೀಡುವ ಬಗ್ಗೆ ಬಿಎಂಟಿಸಿಯಿಂದ ಅಧಿಕೃತ ಆದೇಶ ಹೊರಡಿಸಲಾಗಿದೆ.