alex Certify ಬೇಕಾಬಿಟ್ಟಿಯಾಗಿ ಬಾಟಲಿ ನೀರು ಮಾರಾಟ ಮಾಡುವವರಿಗೆ ಬಿಗ್ ಶಾಕ್: BIS ಮಹತ್ವದ ಕ್ರಮ, ಏಪ್ರಿಲ್ 1 ರಿಂದಲೇ ಜಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಕಾಬಿಟ್ಟಿಯಾಗಿ ಬಾಟಲಿ ನೀರು ಮಾರಾಟ ಮಾಡುವವರಿಗೆ ಬಿಗ್ ಶಾಕ್: BIS ಮಹತ್ವದ ಕ್ರಮ, ಏಪ್ರಿಲ್ 1 ರಿಂದಲೇ ಜಾರಿ

ಏಪ್ರಿಲ್ 1 ರಿಂದ ಬೇಕಾದಂತೆ ಬಾಟಲಿ ನೀರು ಮಾರಾಟ ಮಾಡುವಂತಿಲ್ಲ. ನಿಯಮ ಬಿಗಿಯಾಗಲಿದ್ದು, ಕಂಪನಿಗಳಿಗೆ ಪ್ರಮಾಣೀಕರ ಪಡೆಯುವುದು ಕಡ್ಡಾಯವಾಗಿದೆ.

ಬಾಟಲ್ ನೀರು ಮಾರಾಟ ಮಾಡುವುದು ಕಠಿಣವಾಗಲಿದೆ. ಎಫ್‌ಎಸ್‌ಎಸ್‌ಎಐ ಕಂಪನಿ ನಿಯಮಗಳನ್ನು ಬದಲಾಯಿಸಿದೆ. ಬಾಟಲಿ ನೀರು ಮತ್ತು ಖನಿಜಯುಕ್ತ ನೀರಿನ ತಯಾರಕರು ಪರವಾನಗಿ ಪಡೆಯಲು ಎಫ್‌ಎಸ್‌ಎಸ್‌ಎಐ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಪ್ರಮಾಣೀಕರಣವನ್ನು ಪಡೆಯಬೇಕು.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಆಯುಕ್ತರಿಗೆ ಕಳುಹಿಸಿದ ಪತ್ರದಲ್ಲಿ ಎಫ್‌ಎಸ್‌ಎಸ್‌ಎಐ ಈ ನಿರ್ದೇಶನ ನೀಡಿದೆ. ಈ ನಿರ್ದೇಶನ ಏಪ್ರಿಲ್ 1, 2021 ರಿಂದ ಜಾರಿಗೆ ಬರಲಿದೆ. ನಿಯಮಗಳು 2011 ರ ಪ್ರಕಾರ, ಬಿಐಎಸ್ ಪ್ರಮಾಣೀಕರಣದ ನಂತರ ಮಾತ್ರ ಯಾರಾದರೂ ಬಾಟಲಿ ಕುಡಿಯುವ ನೀರು ಅಥವಾ ಖನಿಜಯುಕ್ತ ನೀರನ್ನು ಮಾರಾಟ ಮಾಡಬಹುದು.

ಬೇಸಿಗೆ ಪ್ರಾರಂಭವಾದ ಕೂಡಲೇ ದೇಶದಲ್ಲಿ ಬಾಟಲಿ ನೀರಿನ ಬೇಡಿಕೆ ವೇಗವಾಗಿ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಲಾಭ ಗಳಿಸಲು ಅನೇಕ ಕಂಪನಿಗಳು ಮಾರುಕಟ್ಟೆಗೆ ಇಳಿಯುತ್ತವೆ. ಈ ಕಂಪನಿಗಳಿಗೆ ನೋಂದಣಿ ಕೂಡ ಇರುವುದಿಲ್ಲ. ಶುದ್ಧತೆಯ ಪುರಾವೆಗಳಿರುವುದಿಲ್ಲ. ಇದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈಗ ಕಡ್ಡಾಯವಾಗಿ ಬಿಐಎಸ್ ಪ್ರಮಾಣೀಕರಣವನ್ನು ಜಾರಿಗೆ ತಂದಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...