ನವದೆಹಲಿ: ಕೊರೊನಾ ವೈರಸ್ ಪರಿಸ್ಥಿತಿ ಇಡೀ ವಿಶ್ವದಲ್ಲಿ ಆಹಾರೋದ್ಯಮದ ಕಾರ್ಯ ವಿಧಾನಕ್ಕೆ ಹೊಸ ರೂಪ ನೀಡಿದೆ. ಕೆಲ ದೇಶಗಳಲ್ಲಿ ರೆಸ್ಟೋರೆಂಟ್ ಉದ್ಯಮವು ಸಂಪೂರ್ಣವಾಗಿ ಆನ್ ಲೈನ್ ಆರ್ಡರ್ ಮೂಲಕವೇ ನಡೆಯುತ್ತಿದೆ. ಅವುಗಳ ಆದಾಯದಲ್ಲಿ ಗಣನೀಯ ಏರಿಕೆಯೂ ಆಗುತ್ತಿದೆ.
ಇತ್ತೀಚೆಗೆ ಕೈಗೊಂಡ ಸರ್ವೆ ಪ್ರಕಾರ ಭಾರತದಲ್ಲಿ ಲಾಕ್ಡೌನ್ ಅವಧಿಯಲ್ಲಿ ಬಿರ್ಯಾನಿಯು ಅತ್ಯಂತ ಪ್ರಿಯ ಆಹಾರವಾಗಿತ್ತು. ಆನ್ ಲೈನ್ ಡೆಲಿವರಿ ಪ್ಲಾಟ್ ಫಾರ್ಮ್ ಈ ಸಂಬಂಧ ಡೇಟಾವೊಂದನ್ನು ಶೇರ್ ಮಾಡಿದೆ.
ಪ್ರತಿ ಸೆಕೆಂಡ್ ಗೆ ಒಂದಕ್ಕಿಂತ ಹೆಚ್ಚು ಬಿರ್ಯಾನಿ ಆರ್ಡರ್ ಬರುತ್ತಿತ್ತು. ಈ ಬಾರಿ 3 ಲಕ್ಷಕ್ಕೂ ಅಧಿಕ ಹೊಸ ಗ್ರಾಹಕರು ಸ್ವಿಗ್ಗಿ ಜತೆ ಜೋಡಣೆಯಾಗಿದ್ದಾರೆ ಎಂದು ಸ್ವಿಗ್ಗಿಯ 5 ನೇ ವರ್ಷದ ವಾರ್ಷಿಕ ವರದಿ ಹೇಳಿದೆ.