ಭಾರತೀಯ ಉದ್ಯಮಿ ಗೌತಮ್ ಅದಾನಿ ಈ ವರ್ಷ ವಿಶ್ವದ ಎಲ್ಲಾ ಶ್ರೀಮಂತರಿಗಿಂತ ಹೆಚ್ಚಿನ ಶತಕೋಟಿ ಮೊತ್ತದ ಹಣವನ್ನ ತಮ್ಮ ಸಂಪತ್ತಿಗೆ ಸೇರಿಸುವ ಮೂಲಕ ಹೊಸ ಸಾಧನೆ ಮಾಡಿದ್ದಾರೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ, 2021ರಲ್ಲಿ ಅದಾನಿ ನಿವ್ವಳ ಮೌಲ್ಯವು 16.2 ಬಿಲಿಯನ್ ಡಾಲರ್ನಿಂದ 50 ಬಿಲಿಯನ್ ಡಾಲರ್ಗೆ ಏರಿಕೆ ಕಂಡಿದೆ.
ಇದು ಈ ವರ್ಷದ ಅತಿ ದೊಡ್ಡ ಸಂಪತ್ತು ಗಳಿಕೆಯಾಗಿದೆ. ಈ ಸಾಧನೆಯನ್ನ ವಿಶ್ವದ ಟಾಪ್ 2 ಶ್ರೀಮಂತರಾದ ಜೆಫ್ಬೆಜೋಸ್ ಹಾಗೂ ಎಲಾನ್ ಮಸ್ಕ್ ಕೂಡ ಈ ವರ್ಷ ಇಷ್ಟು ದೊಡ್ಡ ಮೊತ್ತದಲ್ಲಿ ಸಂಪತ್ತು ಕ್ರೋಢಿಕರಣ ಮಾಡಿಲ್ಲ.
ಅದಾನಿ ಉದ್ಯಮ ಕ್ಷೇತ್ರದಲ್ಲಿ ತಮ್ಮ ಕಂಬಂಧಬಾಹುವನ್ನ ವಿಸ್ತರಿಸುತ್ತಲೇ ಇದ್ದಾರೆ. ಭಾರತದಲ್ಲಿ ಬಂದರು, ವಿಮಾನ ನಿಲ್ದಾಣ, ದತ್ತಾಂಶ ಕೇಂದ್ರ ಹಾಗೂ ಕಲ್ಲಿದ್ದಲು ಗಣಿ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಮೂಲಕ ಸಂಪತ್ತಿನ ಮೌಲ್ಯವನ್ನ ಹೆಚ್ಚಿಸಿಕೊಳ್ತಿದ್ದಾರೆ.