ಹಬ್ಬದ ಋತು ಶುರುವಾಗುವ ಮೊದಲೇ ಅನೇಕ ಕಂಪನಿಗಳು ಹಾಗೂ ಬ್ಯಾಂಕ್ ಗಳು ಇದ್ರ ಲಾಭ ಪಡೆಯಲು ಮುಂದಾಗಿವೆ. ಫೆಡರಲ್ ಬ್ಯಾಂಕ್ ಆಫರ್ ಹೊತ್ತು ತಂದಿದೆ. ಕೇವಲ ಒಂದು ರೂಪಾಯಿ ಪಾವತಿಸಿ ನೀವು ಬೈಕ್ ತೆಗೆದುಕೊಂಡು ಹೋಗಬಹುದು. ಹೀರೋ ಮೋಟೋ ಕಾರ್ಪ್, ಹೋಂಡಾ ಮತ್ತು ಟಿವಿಎಸ್‌ನ ನೆಚ್ಚಿನ ಬೈಕ್‌ಗಳನ್ನು ಖರೀದಿಸಬಹುದು.
ಈ ಸೌಲಭ್ಯವು ದೇಶಾದ್ಯಂತ 947 ಶೋ ರೂಂಗಳಲ್ಲಿ ಲಭ್ಯವಿದೆ. ಇದ್ರ ಜೊತೆ ಶೇಕಡಾ 5ರಷ್ಟು ಕ್ಯಾಶ್ಬ್ಯಾಕ್ ಕೂಡ ನಿಮಗೆ ಸಿಗಲಿದೆ. ಬ್ಯಾಂಕ್ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಪ್ರಕಾರ, ಗ್ರಾಹಕರು ಬ್ಯಾಂಕ್ ಶಾಖೆಗೆ ಹೋಗಬೇಕಾಗಿಲ್ಲ. ಡೆಬಿಟ್ ಕಾರ್ಡ್‌ನಲ್ಲಿ ಇಎಂಐ ಸೌಲಭ್ಯ ಲಭ್ಯವಿರುತ್ತದೆ. ಇದು ಸಂಪೂರ್ಣವಾಗಿ ಆನ್‌ಲೈನ್ ಆಗಿರುತ್ತದೆ. ಮನೆಯಿಂದ ನೀವು ಈ ಸೌಲಭ್ಯ ಪಡೆದು ಬೈಕ್ ಖರೀದಿ ಮಾಡಬಹುದು.
ಫೆಡರಲ್ ಬ್ಯಾಂಕ್ ಗ್ರಾಹಕರು 3,6,9 ಅಥವಾ 12 ತಿಂಗಳ ಮರುಪಾವತಿ ಅವಧಿಯನ್ನು ಆಯ್ಕೆ ಮಾಡಬಹುದು. ಈ ಯೋಜನೆಯಡಿ ಸಾಲದ ಮೇಲೆ ಯಾವುದೇ ಸಂಸ್ಕರಣಾ ಶುಲ್ಕವನ್ನು ತೆಗೆದುಕೊಳ್ಳಲಾಗುವುದಿಲ್ಲ. ದೇಶಾದ್ಯಂತ ಹೋಂಡಾ ಮೋಟಾರ್ ಸೈಕಲ್‌ನ 793 ಶೋ ರೂಂಗಳಲ್ಲಿ ಗ್ರಾಹಕರು ಶೇಕಡಾ 5 ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದು. ಗ್ರಾಹಕರು 5676762 ಸಂಖ್ಯೆಗೆ ಎಸ್‌ಎಂಎಸ್ ಅಥವಾ 7812900900 ಗೆ ಮಿಸ್ಡ್ ಕಾಲ್ ನೀಡಿ ಮಾಹಿತಿ ಪಡೆಯಬಹುದು.