ಇಪಿಎಫ್‌ಒ ಪಿಂಚಣಿದಾರರಿಗೆ ಖುಷಿ ಸುದ್ದಿಯೊಂದಿದೆ. ದೀಪಾವಳಿ ಸಂದರ್ಭದಲ್ಲಿ ಹೆಚ್ಚಿನ ಪಿಂಚಣಿ ಸಿಗುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ಕನಿಷ್ಠ ಪಿಂಚಣಿ ಹೆಚ್ಚಿಸುವ ಕಾರ್ಮಿಕ ಸಚಿವಾಲಯದ ಪ್ರಸ್ತಾಪಕ್ಕೆ ಹಣಕಾಸು ಸಚಿವಾಲಯ ಒಪ್ಪಿಗೆ ನೀಡಿದೆ. ಕಾರ್ಮಿಕ ಸಚಿವಾಲಯದ ಪ್ರಸ್ತಾವನೆ ನಂತ್ರ ಕನಿಷ್ಠ ಪಿಂಚಣಿಯನ್ನು ದ್ವಿಗುಣಗೊಳಿಸುವ ಘೋಷಣೆಯನ್ನು ಶೀಘ್ರದಲ್ಲೇ ಮಾಡುವ ಸಾಧ್ಯತೆಯಿದೆ.
ಮೂಲಗಳ ಪ್ರಕಾರ, ಕನಿಷ್ಠ ಪಿಂಚಣಿಯನ್ನು 1000 ರೂಪಾಯಿಗಳಿಂದ 2,000 ರೂಪಾಯಿಗಳಿಗೆ ಹೆಚ್ಚಿಸುವ ಸಂಭವವಿದೆ. ಪಿಂಚಣಿ ದ್ವಿಗುಣಗೊಳಿಸುವುದ್ರಿಂದ ಸರ್ಕಾರಕ್ಕೆ 2000-2500 ಕೋಟಿ ರೂಪಾಯಿ ಹೊರೆಯಾಗಲಿದೆ. ಇದ್ರ ಲಾಭವನ್ನು ಸುಮಾರು 60 ಲಕ್ಷ ಪಿಂಚಣಿದಾರರು ಪಡೆಯಲಿದ್ದಾರೆ.
ಇಪಿಎಫ್‌ಒ ವ್ಯಾಪ್ತಿಗೆ ಬರುವ ಸಂಘಟಿತ ವಲಯದ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಇಪಿಎಫ್ ಪ್ರಯೋಜನಗಳನ್ನು ಒದಗಿಸುತ್ತವೆ. ಇಪಿಎಫ್‌ನಲ್ಲಿ ಉದ್ಯೋಗದಾತ ಮತ್ತು ಉದ್ಯೋಗಿ ಇಬ್ಬರ ಕೊಡುಗೆ ನೌಕರರ ಮೂಲ ವೇತನದ ಜೊತೆ ಡಿಎಯ ಶೇಕಡಾ 12-12ರಷ್ಟಿರುತ್ತದೆ. ಕಂಪನಿಯ ಶೇಕಡಾ 12ರಷ್ಟು ಕೊಡುಗೆ ನೀಡುತ್ತದೆ.