ಬೆಂಗಳೂರು : ಡಾ. ಶಿವರಾಜ್ಕುಮಾರ್ ಕನ್ನಡ ಚಿತ್ರರಂಗದ ಹಿರಿಯ ನಟ. ಇಂತಹ ವಯಸ್ಸಿನಲ್ಲೂ ಅವರ ನಟನೆ, ಡ್ಯಾನ್ಸ್ ಗೆ ಯಾರೂ ಸರಿ ಸಾಟಿ ಇಲ್ಲ.ನಟ. ಡಾ. ರಾಜ್ಕುಮಾರ್ಅವರ ಹಿರಿಯಪುತ್ರ. ಶಿವಣ್ಣ ಎಂದೇ ಹೆಸರಾದ ಶಿವರಾಜ್ಕುಮಾರ್, ನಟಿಸಿದ ಮೊದಲ ಮೂರೂ ಚಿತ್ರಗಳು 100 ದಿನ ಪ್ರದರ್ಶನ ಕಂಡು ಹ್ಯಾಟ್ರಿಕ್ ಹೀರೋ ಬಿರುದು ಪಡೆದ ಹಿರಿಮೆ ಇವರದ್ದು.
ನಟ ಶಿವಣ್ಣಗೆ ಕ್ಯಾನ್ಸರ್ ಇರುವ ವಿಚಾರ ಹಲವರಿಗೆ ಗೊತ್ತಿರಲಿಲ್ಲ. ಅಮೆರಿಕಕ್ಕೆ ತೆರಳುವಾಗ ಕೂಡ ಶಿವಣ್ಣ ಅನಾರೋಗ್ಯದ ಹಿನ್ನೆಲೆ ನಾನು ಅಮೆರಿಕಕ್ಕೆ ಚಿಕಿತ್ಸೆ ಪಡೆಯಲು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ್ದರು.
ಶಿವಣ್ಣ ಅವರಿಗೆ ಮೂತ್ರಪಿಂಡದ ಕ್ಯಾನ್ಸರ್ ಇದ್ದು, ಅಮೆರಿಕದಲ್ಲಿ ನಿನ್ನೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಶಿವಣ್ಣನ ಆರೋಗ್ಯದ ಬಗ್ಗೆ ಬಿಗ್ ಅಪ್ ಡೇಟ್ ನೀಡಿದ ವೈದ್ಯರು
ಶಿವಣ್ಣ ಅವರಿಗೆ ಮೂತ್ರಪಿಂಡದ ಕ್ಯಾನ್ಸರ್ ಇದ್ದು, ಕ್ಯಾನ್ಸರ್ ಇರುವ ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಶಿವರಾಜ್ ಕುಮಾರ್ ಗೆ ಮೂತ್ರಪಿಂಡದ ಕ್ಯಾನ್ಸರ್ ಇತ್ತು. ಸದ್ಯ ಕ್ಯಾನ್ಸರ್ ತಗುಲಿದ ಮೂತ್ರ ಪಿಂಡವನ್ನು ತೆಗೆದು ಹಾಕಿ ಕೃತಕ ಮೂತ್ರ ಪಿಂಡವನ್ನು ಅಳವಡಿಸಲಾಗಿದೆ. ಸದ್ಯ ಅವರು ದೈಹಿಕವಾಗಿ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ , ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯ ಡಾ.ಮುರುಗೇಶ್ ಮಾಹಿತಿ ನೀಡಿದ್ದಾರೆ.
ಅಮೆರಿಕದ ಫ್ಲೋರಿಡಾದಲ್ಲಿರುವ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಆಸ್ಪತ್ರೆಗೆ ದಾಖಲಾಗಿರುವ ಅವರು ಶಸ್ತ್ರಚಿಕಿತ್ಸೆಯ ನಂತರ ಅವರು ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ.30 ದಿನ ವಿಶ್ರಾಂತಿ ಪಡೆದು ನಂತರ ಅವರು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.