ನೌಕರಿ ಮಾಡುವವರಿಗಿಂದು ಮಹತ್ವದ ಸುದ್ದಿಯಿದೆ. ನೊಟೀಸ್ ಅವಧಿಗಿಂತ ಮೊದಲೇ ಕೆಲಸ ಬಿಟ್ಟರೆ ಶೇಕಡಾ 18ರಷ್ಟು ಜಿಎಸ್ಟಿ ಪಾವತಿ ಮಾಡಬೇಕಾಗುತ್ತದೆ. ಸಾಮಾನ್ಯವಾಗಿ ನೊಟೀಸ್ ಅವಧಿಯನ್ನು ಮುಗಿಸದೆ ಕೆಲಸ ಬಿಡುವ ನೌಕರರು ಕಂಪನಿಗೆ ಸ್ವಲ್ಪ ಮೊತ್ತವನ್ನು ಪಾವತಿಸಬೇಕಾಗುತ್ತದೆ.
ನೊಟೀಸ್ ಅವಧಿ ಮುಗಿಸದೆ ಕೆಲಸ ಬಿಡುವ ನೌಕರರು, ಕಂಪನಿಗೆ ಸ್ವಲ್ಪ ಹಣ ನೀಡಬೇಕು. ಜೊತೆಗೆ ಸರ್ಕಾರಕ್ಕೆ ಶೇಕಡಾ 18ರಷ್ಟು ಜಿಎಸ್ಟಿ ಪಾವತಿ ಮಾಡಬೇಕು. ಗುಜರಾತ್ನ ಅಥಾರಿಟಿ ಆಫ್ ಅಡ್ವಾನ್ಸ್ ರೂಲಿಂಗ್ ದೊಡ್ಡ ನಿರ್ಧಾರ ಕೈಗೊಂಡಿದೆ.
ಅಹಮದಾಬಾದ್ ಮೂಲದ ಕಂಪನಿಯೊಂದರ ಉದ್ಯೋಗಿ ನೊಟೀಸ್ ಅವಧಿಯಿಲ್ಲದೆ ಕೆಲಸ ಬಿಡಲು ನಿರ್ಧರಿಸಿದ್ದ. ಇದು ಗುಜರಾತ್ ಪ್ರಾಧಿಕಾರದ ಮುಂದೆ ಹೋಗಿತ್ತು. ಮೂರು ತಿಂಗಳ ನೊಟೀಸ್ ಅವಧಿ ಪೂರೈಸದೆ ಕೆಲಸ ಬಿಡಲು ಮುಂದಾಗಿದ್ದ ಪ್ರಕರಣ ವಿಚಾರಣೆ ನಡೆಸಿದ ಪ್ರಾಧಿಕಾರ ಕಂಪನಿಗೆ ಹಣ ನೀಡುವ ಜೊತೆಗೆ ಜಿಎಸ್ಟಿ ಭರಿಸುವಂತೆ ಸೂಚನೆ ನೀಡಿದೆ.
ನೊಟೀಸ್ ಅವಧಿಯಲ್ಲಿ ಕೆಲಸ ಮಾಡದೆ ಏಕಾಏಕಿ ಕೆಲಸ ಬಿಟ್ಟರೆ ಕಂಪನಿಗೆ ತೊಂದರೆಯಾಗುತ್ತದೆ. ಬೇರೆ ಬೇರೆ ನೌಕರರಿಗೆ ನೊಟೀಸ್ ಅವಧಿ ಭಿನ್ನವಾಗರುತ್ತದೆ. ನೊಟೀಸ್ ಅವಧಿಯಲ್ಲಿ ಕಂಪನಿ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಸಹಾಯವಾಗುತ್ತದೆ.