ನವದೆಹಲಿ: ಜುಲೈ 1 ರಿಂದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಲವಾರು ಪ್ರಮುಖ ಬದಲಾವಣೆಗಳನ್ನು ಮಾಡಲಿದ್ದು, ಇದು ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತದೆ.
ಮುಂದಿನ ತಿಂಗಳು 1 ರಿಂದ ಎಟಿಎಂ, ಚೆಕ್ ಬುಕ್‌ಗಳು, ಶಾಖೆಗಳಿಂದ ಹಣ ಹಿಂಪಡೆಯಲು ಶುಲ್ಕ ಪಾವತಿಸಬೇಕಾಗುತ್ತದೆ.
ಬ್ಯಾಂಕಿನ ಗ್ರಾಹಕರು ತಿಂಗಳಲ್ಲಿ 4 ಬಾರಿಗಿಂತ ಹೆಚ್ಚು ಸಲ ಬ್ಯಾಂಕಿನಿಂದ ಹಣ ಹಿಂತೆಗೆದುಕೊಂಡರೆ, ಬ್ಯಾಂಕ್ ನಿಂದ ಅಂತಹ ಗ್ರಾಹಕರಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದು. ಈ ವ್ಯವಹಾರವು ಬ್ಯಾಂಕ್ ಎಟಿಎಂಗಳಿಗೂ ಸಹ ಅನ್ವಯವಾಗಲಿದೆ. ನೀವು ಎಸ್‌ಬಿಐ ಶಾಖೆ ಅಥವಾ ಎಟಿಎಂನಿಂದ ತಿಂಗಳಿಗೆ 4 ಸಲದ ಮಿತಿ ನಂತರ ಹಣವನ್ನು ಹಿಂತೆಗೆದುಕೊಂಡರೆ, ನೀವು 15 ರೂ. ಮತ್ತು ಜಿಎಸ್ಟಿ ಪಾವತಿಸಬೇಕಿದ್ದು, ಪ್ರತಿ ಹೆಚ್ಚುವರಿ ವಹಿವಾಟಿನಲ್ಲೂ ಈ ಶುಲ್ಕವನ್ನು ವಿಧಿಸಲಾಗುತ್ತದೆ. ಎಸ್‌ಬಿಐ ಅಲ್ಲದ ಶಾಖೆಗಳಿಗೂ ಈ ನೀತಿ ಅನ್ವಯಿಸುತ್ತದೆ.
ಎಸ್‌ಬಿಐ ಎಟಿಎಂ ಮತ್ತು ಎಸ್‌ಬಿಐ ಹೊರತಾದ ಎಟಿಎಂನಿಂದ ಗ್ರಾಹಕರು ನಾಲ್ಕು ವಹಿವಾಟು ನಂತರ ಹಣವನ್ನು ಹಿಂತೆಗೆದುಕೊಂಡರೆ ಸೇವಾ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸೇವಾ ಶುಲ್ಕದ ಹೆಸರಿನಲ್ಲಿ ಬ್ಯಾಂಕ್ ಗೆ 15 ರೂ ಜೊತೆಗೆ ಜಿಎಸ್ಟಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 10 ಚೆಕ್ ಬುಕ್‌ಗಳಲ್ಲಿ ಬಿಎಸ್‌ಬಿಡಿ ಖಾತೆದಾರರಿಗೆ ಶುಲ್ಕ ವಿಧಿಸುವುದಿಲ್ಲ. ಆದರೆ, ನಂತರದ ಚೆಕ್ ಬುಕ್ ಗೆ 40 ರೂ. ಜೊತೆಗೆ ಜಿಎಸ್‌ಟಿ ವಿಧಿಸಲಾಗುತ್ತದೆ. 25 ಚೆಕ್ ಗಳೊಂದಿರುವ ಚೆಕ್‌ಬುಕ್ ಗೆ 75 ರೂ. ಶುಲ್ಕ ವಿಧಿಸಲಾಗುತ್ತದೆ. ತುರ್ತು ಚೆಕ್ಬುಕ್ ಪಡೆಯಲು 50 ರೂ. ಮತ್ತು ಜಿಎಸ್ಟಿ ಶುಲ್ಕವಿದೆ. ಹಿರಿಯ ನಾಗರಿಕರು ಈ ಸೌಲಭ್ಯ ಉಚಿತವಾಗಿರುತ್ತದೆ ಎಂದು ಹೇಳಲಾಗಿದೆ.