ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಎಚ್‌ಡಿಎಫ್‌ಸಿ ತನ್ನ ಗ್ರಾಹಕರಿಗೆ ಮಹತ್ವದ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಅಪೊಲೊ ಆಸ್ಪತ್ರೆಯೊಂದಿಗೆ ಎಚ್ ಡಿ ಎಫ್ ಸಿ ಒಪ್ಪಂದ ಮಾಡಿಕೊಂಡಿದ್ದು, ದಿ ಹೆಲ್ತಿ ಲೈಫ್ ಪ್ರೋಗ್ರಾಂ ಶುರು ಮಾಡಿದೆ.
ಇದರ ಅಡಿಯಲ್ಲಿ ಬ್ಯಾಂಕ್ ಆಸ್ಪತ್ರೆಯ ಬಿಲ್ ಪಾವತಿಸಲು ಗ್ರಾಹಕರಿಗೆ 40 ಲಕ್ಷ ರೂಪಾಯಿವರೆಗೆ ಅಸುರಕ್ಷಿತ ಸಾಲವನ್ನು ನೀಡುತ್ತಿದೆ. ಈ ವೈಯಕ್ತಿಕ ಸಾಲವು ಅರ್ಜಿ ಸಲ್ಲಿಸಿದ 10 ಸೆಕೆಂಡುಗಳಲ್ಲಿ ಗ್ರಾಹಕರ ಬ್ಯಾಂಕ್ ಖಾತೆಯನ್ನು ತಲುಪುತ್ತದೆ. ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ನಲ್ಲಿ ಬ್ಯಾಂಕ್ ತನ್ನ ಗ್ರಾಹಕರಿಗೆ ಯಾವುದೇ ವೆಚ್ಚವಿಲ್ಲದ ಇಎಂಐ ನೀಡಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಸಿಇಒ ಮತ್ತು ಎಂಡಿ ಆದಿತ್ಯ ಪುರಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸಾಲಗಳನ್ನು ಗ್ರಾಹಕರಿಗೆ ಅಗತ್ಯವಿದ್ದರೆ ತಕ್ಷಣ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಕಾರ್ಯಕ್ರಮದಡಿಯಲ್ಲಿ ಕಣ್ಣು, ಹೆರಿಗೆ ಸೇರಿದಂತೆ ಎಲ್ಲದಕ್ಕೂ ಸಾಲ ಸಿಗಲಿದೆ. ಸುಲಭ ಕಂತುಗಳಲ್ಲಿ ಸಾಲ ಸಿಗಲಿದೆ. ಕ್ರೆಡಿಟ್ ಕಾರ್ಡ್ ಸೌಲಭ್ಯದ ಜೊತೆಗೆ ಇಎಂಐ ರಿಯಾಯಿತಿಗಳು ಸಿಗಲಿವೆ. ಈ ಕಾರ್ಯಕ್ರಮವು ಎಚ್‌ಡಿಎಫ್‌ಸಿ ಬ್ಯಾಂಕಿನ 6.5 ಕೋಟಿ ಗ್ರಾಹಕರಿಗೆ ಪ್ರಯೋಜನ ನೀಡಲಿದೆ.