ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ 14 ದಿನಗಳ ಕಾಲ ಕಠಿಣ ರೂಲ್ಸ್ ಜಾರಿ ಮಾಡುತ್ತಿದ್ದು, ನಾಳೆ ರಾತ್ರಿಯಿಂದಲೇ ಇದು ಜಾರಿಗೆ ಬರಲಿದೆ.
ಇದರ ಮಧ್ಯೆ ಮತ್ತೆ ಲಾಕ್ ಡೌನ್ ಆದರೆ ತಮಗೆ ಎಲ್ಲಿ ಮದ್ಯ ಸಿಗುವುದಿಲ್ಲವೋ ಎಂಬ ಆತಂಕದಲ್ಲಿದ್ದ ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ.
ಮದ್ಯವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಅವಕಾಶ ಸಿಗಲಿದ್ದು, ಆದರೆ ಇದಕ್ಕೆ ಸೀಮಿತ ಅವಧಿ ಫಿಕ್ಸ್ ಆಗಲಿದೆ.