ಸರ್ಕಾರ ಸ್ಥಳೀಯ ಅಂಗಡಿಗಳ ಮಿಠಾಯಿಗಳ ಗುಣಮಟ್ಟ ಸುಧಾರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಅಕ್ಟೋಬರ್ 1 ರಿಂದ ಈ ನಿಯಮ ಜಾರಿಗೆ ಬರಲಿದೆ. ಇನ್ಮುಂದೆ ಸಿಹಿತಿಂಡಿಗಳ ಅಂಗಡಿಗಳು, ಸಿಹಿ ತಿಂಡಿಯ ಉತ್ಪಾದನಾ ದಿನಾಂಕ ಮತ್ತು ಸಿಹಿತಿಂಡಿಗಳನ್ನು ಬಳಸುವ ಅವಧಿಯನ್ನು ಸ್ಪಷ್ಟವಾಗಿ ಹೇಳಬೇಕು.
ಪ್ಯಾಕ್ ಮಾಡಿದ ಸಿಹಿತಿಂಡಿಗಳ ಡಬ್ಬಕ್ಕೆ ಈ ವಿವರಗಳನ್ನು ನಮೂದಿಸುವುದು ಈ ಮೊದಲೇ ಕಡ್ಡಾಯವಾಗಿದೆ. ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಈಗ ಹೊಸ ನಿಯಮಗಳನ್ನು ಹೊರಡಿಸಿದೆ. ತೆರೆದ ಸಿಹಿತಿಂಡಿಗಳನ್ನು ಮಾರಾಟ ಮಾಡುವ ಮಾರಾಟಗಾರರು ಅದರ ಅವಧಿ ನಿಗದಿಪಡಿಸಬೇಕು. ಗ್ರಾಹಕರಿಗೆ ಎಷ್ಟು ದಿನ ಸಿಹಿತಿಂಡಿ ಬಳಕೆಗೆ ಯೋಗ್ಯವಾಗಿರಲಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು.
ಹಳೆಯ ಹಾಗೂ ಅವಧಿ ಮುಗಿದ ತಿಂಡಿಗಳನ್ನು ಮಾರಾಟ ಮಾಡ್ತಿರುವ ಬಗ್ಗೆ ಮಾಹಿತಿ ಸಿಕ್ಕ ನಂತ್ರ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಈ ನಿರ್ಧಾರ ತೆಗೆದುಕೊಂಡಿದೆ. ತೆರೆದ ತಿಂಡಿಗಳ ಬಗ್ಗೆ ಗ್ರಾಹಕನಿಗೆ ಯಾವುದೇ ಮಾಹಿತಿಯಿರುವುದಿಲ್ಲ. ಕೊನೆ ದಿನಾಂಕ ಅಥವಾ ತಯಾರಿಸಿದ ದಿನಾಂಕದ ಬಗ್ಗೆ ತಿಳಿದಿರುವುದಿಲ್ಲ. ಇದ್ರ ಸೇವನೆಯಿಂದ ಆರೋಗ್ಯ ಹದಗೆಡುವುವ ಸಾಧ್ಯತೆಯಿರುತ್ತದೆ.