ಕೊರೊನಾ ಲಾಕ್ಡೌನ್ ಕಾರಣದಿಂದ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂಬ ಮಾತುಗಳ ಮಧ್ಯೆ ಬ್ಯಾಂಕ್ ಠೇವಣಿಗಳ ವಿಷಯದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
ದೇಶದ ಬ್ಯಾಂಕುಗಳಲ್ಲಿರುವ ಮೊತ್ತ ಬರೋಬ್ಬರಿ 150 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದ್ದು, ಕಳೆದ ಒಂದು ದಶಕದ ಅವಧಿಯಲ್ಲಿ ಗಣನೀಯ ಪ್ರಮಾಣದಲ್ಲಿ ಠೇವಣಿ ಹರಿದುಬಂದಿದೆ.
ಇಂದಿನಿಂದ ದೇಶದಾದ್ಯಂತ ನಾಲ್ಕು ದಿನಗಳ ಕಾಲ ‘ಲಸಿಕೆ ಉತ್ಸವ’
2011ರಲ್ಲಿ ಬ್ಯಾಂಕುಗಳಲ್ಲಿದ್ದ ಠೇವಣಿ ಮೊತ್ತ 50 ಲಕ್ಷ ಕೋಟಿ ರೂಪಾಯಿಗಳಿಗಾಗಿದ್ದು, 2021 ಮಾರ್ಚ್ 26ರ ವೇಳೆಗೆ ಈ ಮೊತ್ತ 151.13 ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.