ಉದ್ಯೋಗಿಗಳ ಕೆಲಸದ ಅವಧಿ ಕುರಿತಂತೆ ಕೇಂದ್ರ ಕಾರ್ಮಿಕ ಸಚಿವಾಲಯ ಮಹತ್ವದ ತೀರ್ಮಾನ ಕೈಗೊಳ್ಳಲು ಮುಂದಾಗಿದೆ. ಪ್ರಸ್ತುತವಿರುವ ವಾರಕ್ಕೆ ಗರಿಷ್ಠ 48 ಗಂಟೆಗಳ, ದಿನಕ್ಕೆ ಎಂಟು ಗಂಟೆಗಳ ದುಡಿಮೆಯ ಅವಧಿಯನ್ನು ಬದಲಾಯಿಸಲಾಗುತ್ತಿದ್ದು, ಈ ಪ್ರಸ್ತಾವನೆಯನ್ನು ಕಾರ್ಮಿಕ ಸಚಿವಾಲಯ ಅನುಮೋದಿಸಿದೆ ಎಂದು ತಿಳಿದುಬಂದಿದೆ.
ನೂತನ ಪ್ರಸ್ತಾವನೆಯ ಪ್ರಕಾರ ಐಟಿಯೇತರ ಕ್ಷೇತ್ರದ ಉದ್ಯೋಗಿಗಳು ಇನ್ನು ಮುಂದೆ ದಿನಕ್ಕೆ ಹನ್ನೆರಡು ಗಂಟೆಗಳಂತೆ ವಾರಕ್ಕೆ ನಾಲ್ಕು ದಿನಗಳ ಕಾಲ ಕೆಲಸ ಮಾಡಬೇಕಾಗುತ್ತದೆ. ಮೂರು ದಿನಗಳ ಕಾಲ ವೇತನ ಸಹಿತ ರಜೆ ಇರಲಿದ್ದು, ಒಂದೊಮ್ಮೆ ಈ ಅವಧಿಯಲ್ಲಿ ಕಾರ್ಯನಿರ್ವಹಿಸಿದರೆ ವೇತನ ನೀಡಬೇಕಾಗುತ್ತದೆ. ಈ ಪದ್ಧತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಲಿದೆ ಎಂದು ಹೇಳಲಾಗಿದೆ.
ಹಿರಿಯ ನಾಗರಿಕರಿಗೆ ಮತ್ತೊಂದು ಗುಡ್ ನ್ಯೂಸ್
ಈವರೆಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರ ಇಂತಹ ಪದ್ಧತಿ ಇದ್ದು, ಇನ್ನು ಮುಂದೆ ಇತರ ಕ್ಷೇತ್ರಗಳಿಗೂ ಇದನ್ನು ವಿಸ್ತರಿಸಲಾಗುತ್ತಿದೆ. ನೂತನ ಕೆಲಸದ ನಿಯಮ ಜಾರಿಗೆ ಬಂದರೆ ಉತ್ಪಾದಕ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.