ದೀಪಾವಳಿ ಹತ್ತಿರ ಬರ್ತಿದೆ. ದೀಪಾವಳಿ ಸಂದರ್ಭದಲ್ಲಿ ಉಡುಗೊರೆ ನೀಡುವ ಸಂಪ್ರದಾಯವಿದೆ. ಉಡುಗೊರೆ ನೀಡುವ ಮೊದಲು ಉಡುಗೊರೆ ತೆರಿಗೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ.
ಉಡುಗೊರೆ ತೆರಿಗೆ ಕಾಯ್ದೆಯನ್ನು ಕೇಂದ್ರ ಸರ್ಕಾರ ಏಪ್ರಿಲ್ 1958 ರಲ್ಲಿ ಜಾರಿಗೆ ತಂದಿತ್ತು. ಇದನ್ನು ಅಕ್ಟೋಬರ್ 1998 ರಲ್ಲಿ ರದ್ದುಗೊಳಿಸಲಾಗಿದ್ದರೂ, ಇದನ್ನು ಕೇಂದ್ರ ಸರ್ಕಾರ 2004 ರಲ್ಲಿ ಆದಾಯ ತೆರಿಗೆ ನಿಬಂಧನೆಗಳಲ್ಲಿ ಸೇರಿಸಿತು. 2017-18ರಲ್ಲಿ ಹೊರಡಿಸಲಾದ ಐಟಿಆರ್ ಅಧಿಸೂಚನೆಯಲ್ಲಿ ತೆರಿಗೆದಾರರು ಪಡೆದ ಉಡುಗೊರೆಗಳನ್ನು ಬಹಿರಂಗಪಡಿಸುವುದು ಕಡ್ಡಾಯಗೊಳಿಸಲಾಗಿದೆ.
ವಾರ್ಷಿಕವಾಗಿ ಅಪರಿಚಿತರಿಂದ 50 ಸಾವಿರದವರೆಗೆ ನಗದು ಹಣ ಉಡುಗೊರೆಯಾಗಿ ಸಿಕ್ಕಿದ್ರೆ ಅದಕ್ಕೆ ತೆರಿಗೆ ವಿಧಿಸಲಾಗುವುದಿಲ್ಲ. ನಗದು ಉಡುಗೊರೆ 50 ಸಾವಿರಕ್ಕಿಂತ ಹೆಚ್ಚಿದ್ದರೆ ಇತರ ಮೂಲಗಳಿಂದ ಬರುವ ಆದಾಯದಂತೆ ಸಂಪೂರ್ಣ ಮೊತ್ತದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.
ಕುಟುಂಬಸ್ಥರಿಂದ ಸಿಗುವ ಉಡುಗೊರೆಗೆ ಹಾಗೂ ಮದುವೆ, ಸಮಾರಂಭಗಳಲ್ಲಿ ನೀಡುವ ಉಡುಗೊರೆಗೆ ಇದು ಅನ್ವಯಿಸುವುದಿಲ್ಲ. ಇದೇ ನೀತಿ ಆಸ್ತಿ ಉಡುಗೊರೆಗೂ ಅನ್ವಯಿಸುತ್ತದೆ.