
ಫ್ಲಿಪ್ಕಾರ್ಟ್ ನಲ್ಲಿ ದಿನಸಿ ಖರೀದಿ ಮಾಡುವವರಿಗೆ ಖುಷಿ ಸುದ್ದಿಯೊಂದಿದೆ. ನೀವು ದಿನಸಿ ಖರೀದಿ ಮಾಡಿ ಒಂದೂವರೆ ಗಂಟೆಯಲ್ಲಿ ದಿನಸಿ ನಿಮ್ಮ ಮನೆಯಲ್ಲಿರಲಿದೆ. ವಾಲ್ಮಾರ್ಟ್ ಒಡೆತನದ ಫ್ಲಿಪ್‌ಕಾರ್ಟ್ ಒಂದೂವರೆ ಗಂಟೆಗಳಲ್ಲಿ ದಿನಸಿ ವಿತರಣೆ ಮಾಡುವುದಾಗಿ ಘೋಷಿಸಿದೆ.
ಅಮೆಜಾನ್ ಡಾಟ್ ಕಾಮ್ ಮತ್ತು ಮುಖೇಶ್ ಅಂಬಾನಿಯ ಕಂಪನಿ ಜಿಯೋಮಾರ್ಟ್ ಗೆ ಟಕ್ಕರ್ ನೀಡಲು ಫ್ಲಿಪ್ಕಾರ್ಟ್ ಈ ಘೋಷಣೆ ಮಾಡಿದೆ. ಫ್ಲಿಪ್ ಕಾರ್ಟ್ ಕ್ವಿಕ್ 90 ಅಡಿ ಒಂದೂವರೆ ಗಂಟೆಯಲ್ಲಿ ಕಿರಾಣಿ ವಸ್ತುಗಳು ಮತ್ತು ತಾಜಾ ತರಕಾರಿಗಳು, ಮಾಂಸ ಮತ್ತು ಮೊಬೈಲ್ ಫೋನ್‌ಗಳನ್ನು ತಲುಪಿಸಲಿದೆ. ಈ ಸೇವೆ ಆರಂಭದಲ್ಲಿ ಬೆಂಗಳೂರಿನ ಆಯ್ದ ಸ್ಥಳಗಳಲ್ಲಿ ಲಭ್ಯವಿರುತ್ತದೆ. ವರ್ಷದ ಅಂತ್ಯದ ವೇಳೆಗೆ ಇದನ್ನು ದೇಶದ ಆರು ಪ್ರಮುಖ ನಗರಗಳಿಗೆ ವಿಸ್ತರಿಸಲಾಗುವುದು.
ಭಾರತದ ಚಿಲ್ಲರೆ ಮಾರುಕಟ್ಟೆಯು ಪ್ರಸ್ತುತ 950 ಬಿಲಿಯನ್ ಮೌಲ್ಯದ್ದಾಗಿದೆ. 2025–26 ರ ವೇಳೆಗೆ 1,300 ಬಿಲಿಯನ್ ತಲುಪುವ ನಿರೀಕ್ಷೆಯಿದೆ. ಇ-ಕಾಮರ್ಸ್ ವ್ಯವಹಾರವು 78 ಬಿಲಿಯನ್ ಮಾರುಕಟ್ಟೆ ಹೊಂದಿದೆ. 2025 ರ ವೇಳೆಗೆ 100 ಬಿಲಿಯನ್ ತಲುಪಲಿದೆ ಎಂದು ಅಂದಾಜಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಇ-ಕಾಮರ್ಸ್ ವ್ಯಾಪಾರ-ವಹಿವಾಟು ವೇಗ ಪಡೆದಿದೆ.