ಕೊರೊನಾ ಕಾರಣಕ್ಕೆ ತಿಂಗಳಾನುಗಟ್ಟಲೆ ಲಾಕ್ ಡೌನ್ ಜಾರಿಯಾಗಿದ್ದ ಕಾರಣ ವ್ಯಾಪಾರ ವಹಿವಾಟುಗಳು ಬಂದ್ ಆಗಿದ್ದ ಪರಿಣಾಮ ಆರ್ಥಿಕ ಪರಿಸ್ಥಿತಿ ಹದಗೆಟ್ಟಿತ್ತು. ಆ ಬಳಿಕ ಲಾಕ್ ಡೌನ್ ಸಡಿಲಿಕೆಯಾಗಿ ವಹಿವಾಟುಗಳು ಆರಂಭವಾಗಿದ್ದರೂ ಸಹ ಆರ್ಥಿಕ ಪರಿಸ್ಥಿತಿ ಯಥಾಸ್ಥಿತಿಗೆ ಮರಳಿಲ್ಲ. ರಾಜ್ಯ ಸರ್ಕಾರವೂ ಕೂಡ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ನೌಕರರಿಗೆ ವೇತನ ನೀಡಲು ಪರದಾಡುತ್ತಿದೆ.
ಇದರ ಮಧ್ಯೆಯೂ ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವೊಂದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹೌದು, ಯಡಿಯೂರಪ್ಪ ಸಚಿವ ಸಂಪುಟದ 32 ಸದಸ್ಯರು ಹಾಗೂ ರಾಜ್ಯದ 28 ಸಂಸದರ ಬಳಕೆಗಾಗಿ ಅರವತ್ತು ಹೊಸ ಕಾರುಗಳನ್ನು ಖರೀದಿಸುವ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅಸ್ತು ಎಂದಿದೆ.
ದೇಶದ ಜನತೆಗೆ ಮತ್ತೊಂದು ಗುಡ್ ನ್ಯೂಸ್; ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಲಸಿಕೆ
ಪ್ರತಿಯೊಂದು ಕಾರಿಗೆ 23 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದ್ದು, 60 ಕಾರುಗಳ ಖರೀದಿಗೆ ಒಟ್ಟು 13.80 ಕೋಟಿ ರೂಪಾಯಿ ತಗುಲಲಿದೆ ಎಂದು ಹೇಳಲಾಗಿದೆ. ಪ್ರಸ್ತುತ ಬಳಕೆಯಾಗುತ್ತಿರುವ ಕಾರುಗಳು ಕಳೆದ ಸರ್ಕಾರದ ಅವಧಿಯಲ್ಲಿ ಖರೀದಿಯಾಗಿದೆ ಎನ್ನಲಾಗಿದ್ದು, ತೀರ ಹಳೆಯದನ್ನು ಅಲ್ಲ. ಹೀಗಿದ್ದರೂ ಸಹ ಮತ್ತೆ ಹೊಸ ಕಾರುಗಳ ಖರೀದಿಗೆ ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.