alex Certify ಜೂ.1ರಿಂದ ಚಿನ್ನದ ಆಭರಣಗಳಿಗೆ ʼಹಾಲ್ಮಾರ್ಕ್ʼ ಕಡ್ಡಾಯ: ಖರೀದಿಗೂ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜೂ.1ರಿಂದ ಚಿನ್ನದ ಆಭರಣಗಳಿಗೆ ʼಹಾಲ್ಮಾರ್ಕ್ʼ ಕಡ್ಡಾಯ: ಖರೀದಿಗೂ ಮುನ್ನ ನಿಮಗೆ ತಿಳಿದಿರಲಿ ಈ ಮಾಹಿತಿ

ಜೂನ್ 1ರಿಂದ ಚಿನ್ನದ ಆಭರಣಗಳಿಗೆ ಹಾಲ್ಮಾರ್ಕ್ ಕಡ್ಡಾಯವಾಗಲಿದೆ. ಗ್ರಾಹಕರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಜನವರಿ 15ರಿಂದ ಚಿನ್ನದ ಆಭರಣಗಳಿಗೆ ಹಾಲ್ಮಾರ್ಕ್ ಅನಿವಾರ್ಯವೆಂದು ಕೇಂದ್ರ ಸರ್ಕಾರ 2019ರಲ್ಲಿಯೇ ಘೋಷಣೆ ಮಾಡಿತ್ತು. ಹಾಲ್ಮಾರ್ಕಿಂಗ್ ತಯಾರಿಸಲು ಮತ್ತು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ನಲ್ಲಿ ಹೆಸರು ನೋಂದಾಯಿಸಲು ಆಭರಣ ವ್ಯಾಪಾರಿಗಳಿಗೆ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯವನ್ನು ನೀಡಲಾಗಿತ್ತು. ಕೋವಿಡ್ -19 ಸಾಂಕ್ರಾಮಿಕದ ಮಧ್ಯೆ ವ್ಯಾಪಾರಿಗಳ ಬೇಡಿಕೆಯ ಮೇರೆಗೆ ಮತ್ತೆ ಗಡುವು ವಿಸ್ತರಿಸಲಾಗಿತ್ತು.

ಈಗ ಗಡುವನ್ನು ವಿಸ್ತರಿಸುವ ವಿಚಾರವಿಲ್ಲ. ಆಭರಣ ವ್ಯಾಪಾರಿಗಳಿಗೆ ಹಾಲ್ಮಾರ್ಕಿಂಗ್ ಮಂಜೂರು ಮಾಡುವಲ್ಲಿ ಬಿಐಎಸ್ ತೊಡಗಿಸಿಕೊಂಡಿದೆ. ಜೂನ್ ನಿಂದ ಹಾಲ್ಮಾರ್ಕಿಂಗ್ ಕಡ್ಡಾಯಗೊಳಿಸಲು ಸಿದ್ಧರಿದ್ದೇವೆ ಎಂದು ಬಿಐಎಸ್ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ಹೇಳಿದರು. ಈವರೆಗೆ 34,647 ಆಭರಣಕಾರರು ಬಿಐಎಸ್ ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆಂದು ಅವರು ಹೇಳಿದ್ದಾರೆ. ಮುಂದಿನ ಎರಡು ತಿಂಗಳಲ್ಲಿ ಇದು ಲಕ್ಷ ದಾಟಲಿದೆ. ಆನ್ಲೈನ್ ಮೂಲಕವೂ ಹೆಸರು ನೋಂದಾಯಿಸಿಕೊಳ್ಳಬಹುದೆಂದು ಅವರು ಹೇಳಿದ್ದಾರೆ.

ಬುಲಿಯನ್ ಮಾರುಕಟ್ಟೆಯಲ್ಲಿ ಜೂನ್ ಒಂದರ ನಂತ್ರ 14, 18 ಮತ್ತು 22 ಕ್ಯಾರೆಟ್ ಬಂಗಾರದ ಆಭರಣ ಮಾರಾಟಕ್ಕೆ ಮಾತ್ರ ಅವಕಾಶವಿರಲಿದೆ. ಕಡ್ಡಾಯ ಹಾಲ್ಮಾರ್ಕಿಂಗ್ ಗ್ರಾಹಕರಿಗೆ ಗುಣಮಟ್ಟದ ಶುದ್ಧ ಆಭರಣಗಳನ್ನು ಖರೀದಿಸಲು ನೆರವಾಗುತ್ತದೆ. ಭಾರತ ಅತಿ ಹೆಚ್ಚು ಚಿನ್ನ ಆಮದು ಮಾಡಿಕೊಳ್ಳುವ ದೇಶವಾಗಿದೆ. ಭಾರತವು ವಾರ್ಷಿಕವಾಗಿ 700–800 ಟನ್ ಚಿನ್ನವನ್ನು ರಫ್ತು ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...