ನವದೆಹಲಿ: ಏಪ್ರಿಲ್ 1 ರಿಂದ ವೇತನ ನೀಡಿಕೆಯಲ್ಲಿ ಬದಲಾವಣೆಯಾಗಲಿದ್ದು, ಕೈಗೆ ಕಡಿಮೆ ವೇತನ ಸಿಗಲಿದೆ. ಹೊಸ ನಿಯಮಗಳ ಪ್ರಕಾರ ಭತ್ಯೆ ಒಟ್ಟು ವೇತನದ ಶೇಕಡ 50 ರಷ್ಟು ಇದ್ದಲ್ಲಿ ಪಿಎಫ್ ಸೇರಿ ಹೂಡಿಕೆ ಖಾತೆಗಳಿಗೆ ಹೆಚ್ಚಿನ ಮೊತ್ತ ಸೇರಲಿದೆ. ಇದು ನೌಕರರ ವೇತನ ರಚನೆಯಲ್ಲಿ ಬದಲಾವಣೆಗೆ ಕಾರಣವಾಗಲಿದೆ.
ಸರ್ಕಾರದ ನಿಯಮದ ಅನ್ವಯ ಏಪ್ರಿಲ್ 1 ರಿಂದ ನೌಕರರ ಕೈಗೆ ಸಿಗುವ ವೇತನ ಕಡಿಮೆಯಾಗಲಿದೆ. ಈಗಾಗಲೇ ಶೇಕಡಾ 50ರಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಮೂಲವೇತನ ಹೊಂದಿರುವ ನೌಕರರಿಗೆ ಪರಿಣಾಮ ಬೀರುವುದಿಲ್ಲ. ಮೂಲವೇತನ ಶೇಕಡಾ 50ಕ್ಕಿಂತ ಕಡಿಮೆ ಇರುವವರು ತಮ್ಮ ಸಂಬಳದಲ್ಲಿ ಬದಲಾವಣೆ ಕಾಣಲಿದ್ದಾರೆ.
ಕಳೆದ ವರ್ಷ ಸಂಸತ್ತಿನಲ್ಲಿ ಅಂಗೀಕರಿಸಲಾದ ವೇತನ ಸಂಹಿತೆ ಮಸೂದೆಯಿಂದಾಗಿ ಏಪ್ರಿಲ್ 1 ರಿಂದ ವೇತನ ರಚನೆಯಲ್ಲಿ ಬದಲಾವಣೆಯಾಗಲಿದೆ.
ಮೂಲವೇತನದ ಒಟ್ಟು ವೇತನದ ಶೇಕಡ 50 ಅಥವಾ ಅದಕ್ಕಿಂತ ಹೆಚ್ಚಿದ್ದರೆ ಮೂಲವೇತನ ಹೆಚ್ಚಾಗುತ್ತಿದ್ದಂತೆ ಪಿಎಫ್ ನಲ್ಲಿ ಬದಲಾವಣೆಯಾಗಲಿದೆ. ಪಿಎಫ್ ಮೂಲವೇತನ ಆಧರಿಸಿದ ಕಾರಣ ನೌಕರರ ವೇತನ ಹಾಗೂ ಪಿಎಫ್ ನಲ್ಲಿಯೂ ಬದಲಾವಣೆಯಾಗಲಿದೆ.
ಕಾರ್ಮಿಕ ಕಾಯ್ದೆ ಅನ್ವಯ ಗ್ರಾಚುಟಿ ನಿಯಮದಲ್ಲಿ ಬದಲಾವಣೆಯಾಗಲಿದೆ. ಇದರೊಂದಿಗೆ ಎಲ್.ಟಿ.ಸಿ. ನಿಯಮ, ಡಿಎ ಹೆಚ್ಚಳ ಹಾಗೂ ಇಪಿಎಫ್ಒ ಕೊಡುಗೆ, ಹಿರಿಯ ನಾಗರಿಕರಿಗೆ ತೆರಿಗೆ ನಿಯಮದ ಬದಲಾವಣೆ ಸೇರಿ ಅನೇಕ ಬದಲಾವಣೆಗಳಾಗಲಿವೆ.