ಲಾಕ್‌ಡೌನ್ ಅನಿಶ್ಚಿತತೆ ಬಳಿಕ ಬೇಡಿಕೆಯಲ್ಲಿ ತೀವ್ರವಾದ ಏರುಗತಿ ಕಾಣುತ್ತಲೇ ಭಾರೀ ಉತ್ತೇಜಿತರಾದಂತೆ ಕಾಣುತ್ತಿರುವ ಭಾರತೀಯ ಐಟಿ ಕಂಪನಿಗಳು 2021-22ರ ಸಾಲಿಗೆ ದೊಡ್ಡ ಮಟ್ಟದಲ್ಲಿ ಹೈರಿಂಗ್ ಪ್ರಕ್ರಿಯೆ ಮಾಡಲು ಸಜ್ಜಾಗುತ್ತಿವೆ.
ದೇಶದ ನಾಲ್ಕು ಅಗ್ರ ಐಟಿ ಸಂಸ್ಥೆಗಳಾದ ಟಿಸಿಎಸ್, ಇನ್ಫೋಸಿಸ್, ಎಚ್‌ಸಿಎಲ್ ಹಾಗೂ ವಿಪ್ರೋ ಸಮಗ್ರವಾಗಿ 91,000 ಮಂದಿಯನ್ನು ದೇಶದ ಅನೇಕ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಿಂದ ನೇರವಾಗಿ ಹೈರ್ ಮಾಡಿಕೊಳ್ಳಲಿವೆ. ಇದು ಕಳೆದ ವರ್ಷಕ್ಕಿಂದ ದೊಡ್ಡ ಕ್ಯಾಂಪಸ್ ಹೈರಿಂಗ್ ಪ್ರಕ್ರಿಯೆ ಆಗಿದೆ.
ಕೋವಿಡ್-19 ದಾಳಿಗೂ ಮುನ್ನ ಮುಗಿಸಲಾಗಿದ್ದ ಕ್ಯಾಂಪಸ್ ಹೈರಿಂಗ್ ಪ್ರಕ್ರಿಯೆಗಳಲ್ಲಿ ಆಯ್ಕೆಯಾಗಿದ್ದ ಜನರಿಗೆ ತಡವಾಗಿಯಾದರೂ ಆಫರ್ ಲೆಟರ್‌ಗಳು ತಲುಪಿವೆ.
ಪ್ರಸಕ್ತ ವಿತ್ತೀಯ ವರ್ಷದಷ್ಟೇ ಹೈರಿಂಗ್ ಅನ್ನು (ಸುಮಾರು 40000) ಮುಂದಿನ ವರ್ಷವೂ ಮಾಡುವ ನಿರೀಕ್ಷೆಯನ್ನು ಕಂಪನಿ ಹೊಂದಿದೆ ಎಂದು ಟಿಸಿಎಸ್‌ನ ಕಾರ್ಯನಿರ್ವಾಹಕ ವಿಪಿ ಹಾಗೂ ಎಚ್‌ಆರ್ ಮುಖ್ಯಸ್ಥ ಮಿಲಿಂದ್ ಲಕ್ಕದ್ ತಿಳಿಸಿದ್ದಾರೆ.
ಕಳೆದ ವರ್ಷ 15,000 ಮಂದಿಯನ್ನು ಕ್ಯಾಂಪಸ್ ಹೈರಿಂಗ್ ಮಾಡಿಕೊಂಡಿದ್ದ ಇನ್ಫೋಸಿಸ್, ಮುಂದಿನ ವಿತ್ತೀಯ ವರ್ಷದಲ್ಲಿ 24,000 ಮಂದಿಯನ್ನು ಹೊಸದಾಗಿ ಹೈರಿಂಗ್ ಮಾಡುವ ಅಂದಾಜು ಇಟ್ಟುಕೊಂಡಿದೆ.
ಇದೇ ಅವಧಿಯಲ್ಲಿ ಎಚ್‌ಸಿಎಲ್ 15,000 ಮಂದಿಯನ್ನು ಫ್ರೆಶ್ ಆಗಿ ಹೈರ್ ಮಾಡುವ ಟಾರ್ಗೆಟ್ ಇಟ್ಟುಕೊಂಡಿದೆ.
ಜಾಗತಿಕ ಮಟ್ಟದ ಸಂಸ್ಥೆಗಳಿಂದ ಭಾರೀ ಡೀಲ್‌ಗಳು ಸೇರಿದಂತೆ ಕ್ಲೈಂಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ವ್ಯವಹಾರಗಳನ್ನು ಕೊಡಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ಮಾನವ ಸಂಪನ್ಮೂಲ ವರ್ಧನಗೆ ಮುಂದಾಗಿವೆ.