ದಶಕದಲ್ಲೇ ಅತಿ ಹೆಚ್ಚಿನ ದರವಾದ 20 ಪ್ರತಿಶತದಂತೆ ಬೇಡಿಕೆ ಹೆಚ್ಚಿರುವ ಕಾರಣ ಭಾರತೀಯ ಬೈಸಿಕಲ್ ಉದ್ಯಮವು ಈ ವಿತ್ತೀಯ ವರ್ಷದಲ್ಲಿ 1.45 ಕೋಟಿ ಘಟಕಗಳ ಮಾರಾಟ ಮಾಡುವ ಸಾಧ್ಯತೆ ಇದ್ದು ಕಳೆದ ವರ್ಷ ಮಾರಾಟವಾಗಿದ್ದ 1.2 ಕೋಟಿ ಘಟಕಗಳ ಮಾರಾಟಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಕಾಣಲಿದೆ ಎಂದು ಕ್ರೈಸಿಲ್ ರೇಟಿಂಗ್ಸ್ ತಿಳಿಸಿದೆ.
ಕೋವಿಡ್-19 ಸಾಂಕ್ರಮಿಕದ ಕಾರಣದಿಂದಾಗಿ ಎಲ್ಲೆಡೆ ಫಿಟ್ನೆಸ್ ಅರಿವು ಹೆಚ್ಚಾಗಿ ಬೈಸಿಕಲ್‌ಗಳಿಗೆ ಬೇಡಿಕೆ ಎಂದಿಗಿಂತ ಹೆಚ್ಚಾಗಿದೆ.
ಜಗತ್ತಿನ ಎರಡನೇ ಅತಿ ದೊಡ್ಡ ಬೈಸಿಕಲ್ ಉತ್ಪಾದಕ ದೇಶವಾದ ಭಾರತದಲ್ಲಿ ನಾಲ್ಕು ವಿಧದ ಬೈಸಿಕಲ್‌ಗಳು ಇವೆ — ಸ್ಟಾಂಡರ್ಡ್, ಪ್ರೀಮಿಯಂ, ಮಕ್ಕಳಿಗೆ ಹಾಗೂ ರಫ್ತಿನ ಉದ್ದೇಶಕ್ಕಾಗಿ ತಯಾರಿಸುವಂಥವು. ಇವುಗಳ ಪೈಕಿ, ಸರ್ಕಾರಿ ಖರೀದಿಗಳ ಕಾರಣ, ಸ್ಟಾಂಡರ್ಡ್ ಮಾಡೆಲ್ ಅತಿ ದೊಡ್ಡ ಸಂಖ್ಯೆಯಲ್ಲಿ ಬೇಡಿಕೆ ಹೊಂದಿವೆ.
ಟೆಂಡರ್ ಪ್ರಕ್ರಿಯೆಗಳ ಮೂಲಕ ಸರ್ಕಾರೀ ಇಲಾಖೆಗಳು ಈ ಬೈಸಿಕಲ್‌ಗಳನ್ನು ಖರೀದಿ ಮಾಡುತ್ತಿದ್ದು, ಅನೇಕ ರೀತಿಯ ಜನಕಲ್ಯಾಣ ಕಾರ್ಯಕ್ರಮಗಳ ಮೂಲಕ ವಿತರಣೆ ಮಾಡಲಾಗುತ್ತಿದೆ. ಇದೇ ವೇಳೆ, ಫಿಟ್ನೆಸ್ ಅರಿವು ಹೆಚ್ಚಾದ ಕಾರಣ ಮಕ್ಕಳ ಹಾಗೂ ಪ್ರೀಮಿಯಂ ಮಾಡೆಲ್‌ಗಳಿಗೆ ಬೇಡಿಕೆಯು 40 ಪ್ರತಿಶತದಷ್ಟು ಏರಿಕೆ ಕಾಣುತ್ತಿದೆ.
ರಫ್ತಿನ ಉದ್ದೇಶ ಹಾಗೂ ಇತರ ಬೈಸಿಕಲ್‌ಗಳ ಮಿಕ್ಕ ಹತ್ತು ಪ್ರತಿಶತ ಬೇಡಿಕೆಯನ್ನು ಪೂರ್ಣಗೊಳಿಸುತ್ತಿವೆ. 2020ರ ವಿತ್ತೀಯ ವರ್ಷದಲ್ಲಿ ಸರ್ಕಾರೀ ಖರೀದಿಗಳು ಭಾರೀ ಇಳಿಕೆ ಕಂಡು, ಬೇಡಿಕೆಯಲ್ಲಿ 22 ಪ್ರತಿಶತದಷ್ಟು ಕುಂಠಿತಗೊಂಡ ಕಾರಣ ದೊಡ್ಡ ಕಂಪನಿಗಳೂ ಸಹ ತಮ್ಮ ಶಟರ್‌ಗಳನ್ನು ಮುಚ್ಚಬೇಕಾಗಿ ಬಂದಿತ್ತು.
2021ರ ವಿತ್ತೀಯ ವರ್ಷದಲ್ಲಿ ಬೈಸಿಕಲ್‌ಗಳ ಮಾರಾಟದಲ್ಲಿ 5 ಪ್ರತಿಶತದಷ್ಟು ಏರಿಕೆ ಕಂಡಿದ್ದು, ಮುಂದಿನ ವಿತ್ತೀಯ ವರ್ಷದಲ್ಲಿ 22 ಪ್ರತಿಶತದಷ್ಟು ಏರಿಕೆ ಕಾಣಲಿದೆ ಎಂದು ಅಂದಾಜಿಸಲಾಗಿದೆ.