ವ್ಯಾಪಾರಿ ಪಾವತಿ ಕಂಪನಿಯಾದ ಭಾರತ್ ಪೇ ಕೇವಲ್ ಹಂಡಾರನ್ನ ಸ್ವತಂತ್ರ ನಿರ್ದೇಶಕರಾಗಿ ನೇಮಕ ಮಾಡಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಾಜಿ ಚೇರ್ಮನ್ ಕೇವಲ್ ಹಂಡಾ ಈ ಮೂಲಕ ಭಾರತ್ ಪೇ ಪರಿವಾರವನ್ನ ಸೇರಿಕೊಂಡಿದ್ದಾರೆ .
ವಾಣಿಜ್ಯ, ಕಾರ್ಯತಂತ್ರ, ವ್ಯವಹಾರ ಅಭಿವೃದ್ಧಿ, ಕಾರ್ಪೋರೇಟ್ ವ್ಯವಹಾರಗಳಲ್ಲಿ ಅನುಭವ ಹೊಂದಿರುವ ಕೇವಲ್ ಹಂಡಾ 2005ರಿಂದ 2012ರವರೆಗೆ ಫಿಜರ್ ಲಿಮಿಟೆಡ್ನಲ್ಲಿ ಎಂಡಿಯಾಗಿ ಕಾರ್ಯನಿರ್ವಹಿಸಿದ್ದರು.
ಅಲ್ಲದೇ ಕೇವಲ್ ಹಂಡಾ ಐಎನ್ಜಿ ವೈಶ್ಯ ಬ್ಯಾಂಕ್ನಲ್ಲೂ ಸ್ವತಂತ್ರ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಆರ್ಥಿಕ ವ್ಯವಹಾರ ಲೋಕದಲ್ಲಿ ನಾಯಕತ್ವದ ಅನುಭವ ಹೊಂದಿರುವ ಕೇವಲ್ ವಿವಿಧ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.