ದಾವಣಗೆರೆ: ನೋಂದಣಿಯಾಗದ ಭಾರತ್ ಸ್ಟೇಜ್-4 ಮಾಪನದ ಹೊಸ ವಾಹನಗಳನ್ನು ಸೆ.30 ರವರೆಗೆ ನಿಯಮಾನುಸಾರ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಸರ್ವೊಚ್ಚ ನ್ಯಾಯಾಲಯದ ಆದೇಶದ ಹಿನ್ನಲೆ ಲಾಕ್ಡೌನ್ ಅವಧಿಗೆ ಮುಂಚೆ ಮಾ. 24 ರವರೆಗೆ ಅಧಿಕೃತ ಮಾರಾಟಗಾರರಿಂದ ಮಾರಾಟವಾಗಿ ತಾತ್ಕಾಲಿಕ ನೋಂದಣಿಯನ್ನು ಹೊಂದಿರುವ ಹಾಗೂ ಇ-ವಾಹನ್ ಪೋರ್ಟ್ನಲ್ಲಿ ನಮೂದಿತವಾಗಿ ನೋಂದಣಿಯಾಗದೆ ಉಳಿದಿರುವ ಭಾರತ್ ಸ್ಟೇಜ್-4 ಮಾಪನದ ಹೊಸ ವಾಹನಗಳನ್ನು ಸೆ.30 ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ದಿನಾಂಕ ಮುಗಿದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲಾ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.