ಭಾಗ್ಯಲಕ್ಷ್ಮಿ ಯೋಜನೆ ಬಾಂಡ್ ಪಡೆದವರಿಗೆ ಮುಖ್ಯ ಮಾಹಿತಿ ಇಲ್ಲಿದೆ. 18 ವರ್ಷದ ಬದಲಿಗೆ 21 ವರ್ಷಕ್ಕೆ ಮೆಚುರಿಟಿ ಹಣ ಸಿಗಲಿದೆ.
1 ಲಕ್ಷ ರೂ. ಬದಲಿಗೆ 1.27 ಲಕ್ಷ ರೂಪಾಯಿ ನೀಡಲಿದ್ದು, ಭಾಗ್ಯಲಕ್ಷ್ಮಿ ಯೋಜನೆ ಇನ್ನು ಮುಂದೆ ಸುಕನ್ಯಾ ಸಮೃದ್ಧಿ ಯೋಜನೆಯಾಗಿ ಬದಲಾಗಲಿದೆ. ಈಗಾಗಲೇ ಬಾಂಡ್ ಮಾಡಿಸಿದವರಿಗೆ ಎಲ್ಐಸಿಯಿಂದಲೇ ಹಣ ಬರಲಿದೆ. ಇನ್ನು ಮುಂದೆ ಅಂಚೆ ಇಲಾಖೆ ಸುಕನ್ಯಾ ಸಮೃದ್ಧಿ ಯೋಜನೆಗೆ ನೋಂದಾಯಿಸಿಕೊಳ್ಳಲಿದೆ. ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯನ್ನು ಅಂಚೆ ಇಲಾಖೆಗೆ ವರ್ಗಾಯಿಸಲಾಗಿದೆ. ಸು
ಕನ್ಯಾ ಸಮೃದ್ಧಿ ಯೋಜನೆ ಅಡಿ ರಾಜ್ಯ ಸರ್ಕಾರ ಪ್ರತಿವರ್ಷ ಮಗುವಿಗೆ 3 ಸಾವಿರ ರೂಪಾಯಿಯಂತೆ 15 ವರ್ಷ 45 ಸಾವಿರ ರೂಪಾಯಿ ಪಾವತಿಸಲಿದೆ. ಫಲಾನುಭವಿಗೆ 21 ವರ್ಷ ತುಂಬಿದಾಗ 1.27 ಲಕ್ಷ ರೂಪಾಯಿ ಸಿಗಲಿದೆ. ಎಸ್ಎಸ್ಎಲ್ಸಿ, ಪಿಯುಸಿ ನಂತರದ ಶಿಕ್ಷಣಕ್ಕೆ ಹಣ ಬೇಕಿದ್ದಲ್ಲಿ ಪಡೆಯುವ ಅವಕಾಶವಿದೆ.
ಪೋಷಕರು ಹೆಚ್ಚಿನ ಹಣ ತುಂಬಲು ಕೂಡ ಅವಕಾಶ ನೀಡಲಾಗಿದೆ. ಪೋಷಕರು ನಿಧನರಾದರೆ ವಿಮೆ ಸೌಲಭ್ಯ ಇರುವುದಿಲ್ಲ. ಎಲ್ಐಸಿಯಲ್ಲಿ ವಿಮೆ ಸೌಲಭ್ಯ ಇತ್ತು. ಎರಡು ಯೋಜನೆಗಳಲ್ಲಿ ಮಗು ಮೃತಪಟ್ಟಲ್ಲಿ ಸರ್ಕಾರಕ್ಕೆ ಹಣ ವಾಪಸ್ ಹೋಗಲಿದೆ. ಬಿಪಿಎಲ್ ಕುಟುಂಬಗಳಲ್ಲಿ ಹೆಣ್ಣು ಮಗು ಜನಿಸಿದ ಎರಡು ವರ್ಷದೊಳಗೆ ಬಾಂಡ್ ಮಾಡಿಸಬೇಕೆಂದು ಹೇಳಿದ್ದು, ಅದೇ ಷರತ್ತುಗಳು ಸುಕನ್ಯಾ ಸಮೃದ್ಧಿ ಯೋಜನೆಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ..