ಬೆಂಗಳೂರು: ಭಾಗ್ಯಲಕ್ಷ್ಮಿ ಯೋಜನೆಗೆ ನೋಂದಣಿಯಾದ ಒಂದು ಲಕ್ಷಕ್ಕೂ ಹೆಚ್ಚು ಬಾಂಡ್ ಗಳಿಗೆ ಹಣ ಬಾರದೆ ಅಂಚೆ ಇಲಾಖೆ ಅವುಗಳನ್ನು ಸ್ವೀಕರಿಸಿಲ್ಲ. ಇದರಿಂದಾಗಿ ಹೊಸದಾಗಿ ಯೋಜನೆ ಮಾಡಿಸುವವರಿಗೆ ತೊಂದರೆಯಾಗಿದೆ ಎಂದು ಹೇಳಲಾಗಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಹತ್ವಾಕಾಂಕ್ಷಿಯ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯನ್ನು ಎಲ್ಐಸಿಯಿಂದ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಯೋಜನೆಗೆ ವರ್ಗಾಯಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಚೆ ಇಲಾಖೆಗೆ ಕಳೆದ ಏಪ್ರಿಲ್ ನಿಂದ ಹಣ ನೀಡಿಲ್ಲ ಎಂದು ಹೇಳಲಾಗಿದ್ದು, ಇದರಿಂದಾಗಿ ಫಲಾನುಭವಿಗಳಿಗೆ ತೊಂದರೆಯಾಗಿದೆ.
ಹೊಸದಾಗಿ ನೋಂದಣಿಯಾದ ಒಂದು ಲಕ್ಷಕ್ಕೂ ಹೆಚ್ಚು ಬಾಂಡ್ ಗಳಿಗೆ ಹಣ ಬಾರದೆ ಅಂಚೆ ಇಲಾಖೆ ಅವುಗಳನ್ನು ಸ್ವೀಕರಿಸಿಲ್ಲ. ಕಳೆದ ಸಾಲಿನಲ್ಲಿ 1.56 ಲಕ್ಷ ಜನ ಬಾಂಡ್ ಪಡೆದಿದ್ದರು. ಪ್ರತಿ ಮೂರು ತಿಂಗಳಿಗೊಮ್ಮೆ ಸರ್ಕಾರ ಅಂಚೆ ಇಲಾಖೆ ಖಾತೆಗೆ ಭಾಗ್ಯಲಕ್ಷ್ಮಿ ಬಾಂಡ್ ಯೋಜನೆಯ ಹಣ ತುಂಬಬೇಕಿದೆ. ಆದರೆ ಇದುವರೆಗೆ ಒಂದು ಬಾರಿ ಮಾತ್ರ ಸರ್ಕಾರ ಹಣ ನೀಡಿದ್ದು ಬಿಟ್ಟರೆ ಉಳಿದ ಹಣ ನೀಡಿಲ್ಲ. ಹೀಗಾಗಿ ಅಂಚೆ ಇಲಾಖೆ ಹಣ ನೀಡುವವರೆಗೆ ಬಾಂಡ್ ಪಡೆಯದಿರಲು ನಿರ್ಧರಿಸಿದೆ ಎನ್ನಲಾಗಿದೆ.