ನಿಮ್ಮ ಡೇಟಾ ಕದಿಯುವ ಸಿಸ್ಟಮ್ ಅಪ್ಡೇಟ್ ನಂತೆ ಕಾಣುವ ಮಾಲ್ವೇರ್ ಗಳ ಬಗ್ಗೆ ಎಚ್ಚರ ವಹಿಸುವುದು ಒಳ್ಳೆಯದು ಎಂದು ಹೇಳಲಾಗಿದೆ. ಮಾಧ್ಯಮಗಳ ವರದಿಯ ಪ್ರಕಾರ, ಆಂಡ್ರಾಯ್ಡ್ ನಲ್ಲಿ ಹೊಸರೀತಿಯ ಮಾಲ್ವೇರ್ ಅನ್ನು ಡೌನ್ಲೋಡ್ ಮಾಡಲು ಬಳಕೆದಾರರನ್ನು ಪ್ರೇರೇಪಿಸಿ ವಂಚಿಸಲಾಗುತ್ತಿದೆ.
ಈ ಹೊಸ ಆಂಡ್ರಾಯ್ಡ್ ಮಾಲ್ವೇರ್ ಸಿಸ್ಟಮ್ ಅಪ್ಡೇಟ್ ಎಂದು ನೋಟಿಫಿಕೇಷನ್ ತೋರಿಸುತ್ತದೆ. ಸದ್ಯಕ್ಕೆ ಅಂಡ್ರಾಯಿಡ್ ಮಾಲ್ವೇರ್ ನಿಂದ ಎಷ್ಟು ಪರಿಣಾಮವಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ, ಹೊಸ ಆಂಡ್ರಾಯ್ಡ್ ಮಾಲ್ವೇರ್ ಮೂಲ ಸಿಸ್ಟಮ್ ಅಪ್ಡೇಟ್ ನೋಟಿಫಿಕೇಶನ್ ರೀತಿ ಇರುತ್ತದೆ. ಇದರ ಬಗ್ಗೆ ಹುಷಾರಾಗಿ ಇರುವುದು ಒಳ್ಳೆಯದು. ಇಂತಹ ನೋಟಿಫಿಕೇಶನ್ ಬಂದ ಸಂದರ್ಭದಲ್ಲಿ ಡೌನ್ಲೋಡ್ ಮಾಡುವ ಮೊದಲು ಅದನ್ನು ಸಂಪೂರ್ಣವಾಗಿ ಪರಿಶೀಲಿಸಿ.
ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ನೀವು ಮಾಲ್ವೇರ್ ಅನ್ನು ಸ್ಥಾಪಿಸಿದ್ದರೆ ಅದು ನಿಮ್ಮ ಖಾಸಗಿ ಡೇಟಾದ ವಾಟ್ಸಾಪ್ ಸಂದೇಶಗಳು, ಎಸ್ಎಂಎಸ್, ಟೆಲಿಗ್ರಾಂ ಇನ್ ಬಾಕ್ಸ್, ಬುಕ್ ಮಾರ್ಕ್ ಗಳು, ಗ್ಯಾಲರಿಯಿಂದ ಫೋಟೋಗಳು ಮೊದಲಾದವುಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.
ಕೆಲ ಮಾಧ್ಯಮಗಳ ವರದಿಯ ಪ್ರಕಾರ, ಆಂಡ್ರಾಯ್ಡ್ ಮಾಲ್ವೇರ್ ನಿರ್ದಿಷ್ಟ ಸಮಯದಲ್ಲಿ ಕಾರ್ಯನಿರ್ವಹಿಸಿ ಮಾಹಿತಿಯನ್ನು ಆಜ್ಞಾತ ಕೇಂದ್ರಕ್ಕೆ ರವಾನಿಸುತ್ತದೆ. ಈ ಮೂಲಕ ನಿಮ್ಮ ಆಂಡ್ರಾಯ್ಡ್ ಫೋನ್ ಡೇಟಾದ ನವೀಕೃತ ಆವೃತ್ತಿಗೆ ಹ್ಯಾಕರ್ ಗಳು ಪ್ರವೇಶ ಹೊಂದಿರುತ್ತಾರೆ.
ಅಪಾಯಕಾರಿ ಮಾಲ್ವೇರ್ ಹೊಂದಿರುವ ಆಂಡ್ರಾಯ್ಡ್ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಆಂಡ್ರಾಯ್ಡ್ ಫೋನ್ ಗಳು ಪೂರ್ವನಿಯೋಜಿತವಾಗಿ ನಿಷ್ಕ್ರಿಯಗೊಳಿಸಲಾದ ರೆಪೊಸಿಟರಿಗಳಿಂದ ಆಪ್ ಗಳನ್ನು ಇನ್ ಸ್ಟಾಲ್ ಆಯ್ಕೆಯನ್ನು ಹೊಂದಿವೆ. ಹಾಗಾಗಿ ಆಯ್ಕೆಯನ್ನು ನಿಷ್ಕ್ರಿಯಗೊಳಿಸಿದರೆ ಆಂಡ್ರಾಯ್ಡ್ ಮಾಲ್ವೇರ್ ಅನ್ನು ಸ್ಥಾಪಿಸಲು ಆಪರೇಟಿಂಗ್ ಸಿಸ್ಟಮ್ ಬಳಕೆದಾರರನ್ನು ಅನುಮತಿಸುವುದಿಲ್ಲ.
ಇಂತಹ ಮಾಲ್ವೇರ್ ಗಳಿಂದ ಬಳಕೆದಾರರು ಸುರಕ್ಷಿತವಾಗಿರಬೇಕು. ಅದನ್ನು ಇನ್ಸ್ಟಾಲ್ ಮಾಡುವ ಮೊದಲು ಎಚ್ಚರಿಕೆಯಿಂದ ಪರಿಶೀಲನೆ ನಡೆಸಬೇಕು. ಒಮ್ಮೆ ಇಂತಹ ಮಾಲ್ವೇರ್ ಇನ್ ಸ್ಟಾಲ್ ಮಾಡಿದ ನಂತರದಲ್ಲಿ ಅವುಗಳನ್ನು ತೆಗೆದು ಹಾಕುವುದು ಕಷ್ಟವಾಗುತ್ತದೆ ಎನ್ನಲಾಗಿದೆ.