ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯೊಂದು ಚರ್ಚೆಯಲ್ಲಿದೆ. ಬೇಟಿ ಬಚಾವೊ ಬೇಟಿ ಪಡಾವೊ ಯೋಜನೆಯ ಹೆಸರಿನಲ್ಲಿ ಹೆಣ್ಣುಮಕ್ಕಳಿಗೆ ಎರಡು ಲಕ್ಷ ರೂಪಾಯಿಗಳನ್ನು ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಆದರೆ ಸರ್ಕಾರ ಈ ರೀತಿ ಯಾವುದೇ ಘೋಷಣೆಯನ್ನು ಮಾಡಿಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ.
ಈ ಸುದ್ದಿ ನಕಲಿ ಎಂದು ಟ್ವೀಟ್ ಮೂಲಕ ಪಿಐಬಿ ಮಾಹಿತಿ ನೀಡಿದೆ. ಈ ರೀತಿ ಹಣ ನೀಡುವುದು ಕಾನೂನುಬಾಹಿರ. ಈ ಯೋಜನೆಯಡಿ ಯಾವುದೇ ನಗದು ಪ್ರೋತ್ಸಾಹವನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಿಐಬಿ ಫ್ಯಾಕ್ಟ್ ಚೆಕ್ ಕೇಂದ್ರ ಸರ್ಕಾರದ ನೀತಿ, ಯೋಜನೆಗಳು, ಇಲಾಖೆಗಳು, ಸಚಿವಾಲಯಗಳ ಬಗ್ಗೆ ತಪ್ಪು ಮಾಹಿತಿ ಹರಡುವುದನ್ನು ತಡೆಯುತ್ತದೆ. ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಸುದ್ದಿ ನಿಜವೋ ಸುಳ್ಳೋ ಎಂದು ತಿಳಿಯಲು ಪಿಐಬಿ ಫ್ಯಾಕ್ಟ್ ಚೆಕ್ ಸಹಾಯವನ್ನು ತೆಗೆದುಕೊಳ್ಳಬಹುದು.
ಸ್ಕ್ರೀನ್ಶಾಟ್, ಟ್ವೀಟ್, ಫೇಸ್ಬುಕ್ ಪೋಸ್ಟ್ ಅಥವಾ ಯುಆರ್ಎಲ್ ಮೂಲಕ ಪಿಐಬಿ ಫ್ಯಾಕ್ಟ್ ಚೆಕ್ ವಾಟ್ಸಾಪ್ ಸಂಖ್ಯೆ 918799711259 ಗೆ ಕಳುಹಿಸಬಹುದು ಅಥವಾ ಅದನ್ನು pibfactcheck@gmail.com ಗೆ ಮೇಲ್ ಮಾಡಬಹುದು.