ವ್ಯಾಪಾರ ಶುರು ಮಾಡಿ ಹಣ ಗಳಿಸಲು ಆಸಕ್ತಿಯಿದ್ದರೆ ದಾರಿ ಸಾಕಷ್ಟಿದೆ. ಮನೆಯ ಟೆರೆಸ್ ನಲ್ಲಿಯೇ ನೀವು ವ್ಯಾಪಾರ ಶುರು ಮಾಡಿ ಹಣ ಗಳಿಸಬಹುದು.
ಹಳ್ಳಿಯಾಗಿರಲಿ, ನಗರವಾಗಿರಲಿ, ನೀವು ವಾಸಿಸುವ ಸ್ಥಳದಿಂದಲೇ ವ್ಯಾಪಾರ ಶುರು ಮಾಡಬಹುದು. ಮನೆಯ ಟೆರೆಸ್ ಮೇಲೆ ವ್ಯಾಪಾರ ಶುರು ಮಾಡಿ ಕೈತುಂಬ ಹಣ ಗಳಿಸುವ ಉಪಾಯ ಇಲ್ಲಿದೆ.
ಸೋಲಾರ್ ಪ್ಲಾಂಟ್ ಮೂಲಕ ನೀವು ಹಣ ಗಳಿಸಬಹುದು. ಪ್ರಪಂಚದಾದ್ಯಂತ ಸೌರ ಶಕ್ತಿಗೆ ಹೆಚ್ಚಿನ ಮಹತ್ವ ನೀಡಲಾಗ್ತಿದೆ. ಸರ್ಕಾರ ಕೂಡ ಇದರ ಪ್ರಚಾರ ಮಾಡುತ್ತಿದೆ. ಟೆರೆಸ್ ಮೇಲೆ ಸೌರ ಸ್ಥಾವರ ಇರಿಸುವ ಮೂಲಕ ಲಾಭ ಪಡೆಯಬಹುದು.
ಇದ್ರಲ್ಲಿ ಎರಡು ರೀತಿಯ ಲಾಭವಾಗುತ್ತದೆ. ಒಂದು ವಿದ್ಯುತ್ ಬಿಲ್ ಉಳಿಯುತ್ತದೆ. ಎರಡನೆಯದು ವ್ಯವಹಾರದಿಂದ ಬರುವ ಆದಾಯ. ಸೌರ ಫಲಕದಿಂದ ವಿದ್ಯುತ್ ತಯಾರಿಸಲು ಮನೆಯಲ್ಲಿ ಒಂದು ಮೀಟರ್ ಇರಿಸಲಾಗುತ್ತದೆ. ನಿಗಮಕ್ಕೆ ಎಷ್ಟು ವಿದ್ಯುತ್ ಮಾರಾಟವಾಯಿತು ಎಂಬುದನ್ನು ಇದು ತೋರಿಸುತ್ತದೆ. ಪ್ರತಿ ರಾಜ್ಯದ ಸೌರ ನೀತಿಯ ಆಧಾರದ ಮೇಲೆ ಗಳಿಕೆಯ ದರವನ್ನು ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ ದೆಹಲಿಯಲ್ಲಿ ಡಿಸ್ಕಮ್‌ಗಳು ಪ್ರತಿ ಯೂನಿಟ್‌ಗೆ 5.30 ರೂಪಾಯಿ ನೀಡುತ್ತದೆ.
ಟೆರೆಸ್ ಕೃಷಿ ಮೂಲಕ ಕೂಡ ನೀವು ಗಳಿಕೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಟೆರೆಸ್ ಕೃಷಿ ಪ್ರಸಿದ್ಧಿ ಪಡೆಯುತ್ತಿದೆ. ಟೆರೆಸ್ ಮೇಲೆ ತರಕಾರಿ ಗಿಡಗಳನ್ನು ಬೆಳೆಸಿ, ಬಂದ ತರಕಾರಿ ಮಾರಾಟ ಮಾಡಿ ಗಳಿಸಬಹುದು. ಕೇವಲ ತರಕಾರಿ ಮಾತ್ರವಲ್ಲ, ಹೂ ಅಥವಾ ಗಿಡಗಳನ್ನು ಕೂಡ ನೀವು ಮಾರಾಟ ಮಾಡಬಹುದು. ಟೆರೆಸ್ ಕೃಷಿಯಲ್ಲಿ ಸಾಕಷ್ಟು ವಿಧಾನವಿದೆ. ಅದ್ರಲ್ಲಿ ನಿಮಗೆ ಯಾವುದು ಯೋಗ್ಯ ಎಂಬುದನ್ನು ನೀವು ಮೊದಲು ಆಯ್ಕೆ ಮಾಡಿಕೊಳ್ಳಬೇಕು.
ಮೊಬೈಲ್ ಟವರ್ ಮೂಲಕ ಕೂಡ ನೀವು ಹಣ ಗಳಿಕೆ ಮಾಡಬಹುದು. ಟೆರೆಸ್ ಖಾಲಿಯಿದ್ದರೆ ಮೊಬೈಲ್ ಕಂಪನಿಗಳಿಗೆ ಬಾಡಿಗೆಗೆ ನೀಡಬಹುದು. ಕಂಪನಿಗಳು ಮೊಬೈಲ್ ಟವರ್‌ಗಳನ್ನು ಇಲ್ಲಿ ಇರಿಸುವ ಮೂಲಕ ಪ್ರತಿ ತಿಂಗಳು ಆಕರ್ಷಕ ಮೊತ್ತವನ್ನು ನೀಡುತ್ತವೆ. ಇದಕ್ಕಾಗಿ ನೀವು ನೆರೆಹೊರೆಯ ಜನರಿಂದ ನೋ ಆಬ್ಜೆಕ್ಷನ್ ಪ್ರಮಾಣಪತ್ರ ಜೊತೆ ಸ್ಥಳೀಯ ಪುರಸಭೆಯಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಆದರೆ ಎಚ್ಚರ ಕೆಲವರು ಮೊಬೈಲ್ ಟವರ್ ವಿಚಾರದಲ್ಲಿ ಮೋಸ ಮಾಡುತ್ತಿದ್ದಾರೆ. ಹಾಗಾಗಿ ಅಧಿಕೃತ ಕಂಪನಿ ಜೊತೆ ವ್ಯವಹರಿಸುತ್ತಿದ್ದೀರಾ ಎಂಬುದನ್ನು ಮೊದಲು ತಿಳಿದುಕೊಳ್ಳಿ.
ಟೆರೆಸ್ ಖಾಲಿಯಿದ್ದು, ಎತ್ತರವಾಗಿದ್ದರೆ ಹೋರ್ಡಿಂಗ್ ಹಾಕುವ ಮೂಲಕ ಹಣ ಸಂಪಾದಿಸಬಹುದು. ಅನೇಕ ಕಂಪನಿಗಳು ತಮ್ಮ ವಸ್ತುಗಳ ಪ್ರಚಾರಕ್ಕೆ ಜಾಹೀರಾತು ಫಲಕಗಳನ್ನು ಹಾಕುತ್ತವೆ. ಜಾಹೀರಾತು ಕಂಪನಿಗಳನ್ನು ಸಂಪರ್ಕಿಸಿ ಟೆರೆಸ್ ಮೇಲೆ ಹೋರ್ಡಿಂಗ್ ಹಾಕಬಹುದು. ಇದಕ್ಕೆ ಕಂಪನಿಗಳು ಬಾಡಿಗೆ ನೀಡುತ್ತವೆ.