ಬೆಂಗಳೂರು: ಮಂಗಳವಾರ ಕರೆ ನೀಡಿದ್ದ ಬೆಂಗಳೂರು ಬಂದ್ ನಿಂದ 1500 ಕೋಟಿ ರೂಪಾಯಿಯಷ್ಟು ವಹಿವಾಟು ಸ್ಥಗಿತಗೊಂಡಿದ್ದು, ರಾಜ್ಯ ಸರ್ಕಾರದ ಬೊಕ್ಕಸಕ್ಕೆ 250 ಕೋಟಿ ರೂ.ನಷ್ಟು ಜಿ.ಎಸ್.ಟಿ. ನಷ್ಟವಾಗಿದೆ.
ಒಂದು ದಿನದ ಬಂದ್ ನಿಂದಾಗಿ ರಾಜ್ಯದಲ್ಲಿ ಸುಮಾರು 4500 ಕೋಟಿ ರೂ.ಗೂ ಅಧಿಕ ವಹಿವಾಟು ಸ್ಥಗಿತಗೊಳ್ಳಲಿದ್ದು, ರಾಜ್ಯ ಸರ್ಕಾರಕ್ಕೆ ಸುಮಾರು 450 ಕೋಟಿ ರೂ. ಹೆಚ್ಚು ನಷ್ಟ ಉಂಟಾಗಲಿದೆ. ಅದರಲ್ಲಿ ಬೆಂಗಳೂರಿನ ಪಾಲು ಶೇಕಡ 60ರಷ್ಟು ಆಗಿರುತ್ತದೆ.
ಬೆಂಗಳೂರು ಬಂದ್ ನಿಂದ ವಾಣಿಜ್ಯ ಚಟುವಟಿಕೆ, ಕೈಗಾರಿಕೆ ಉತ್ಪಾದನೆ ಬಹುತೇಕ ಸ್ಥಗಿತಗೊಳ್ಳುತ್ತವೆ. ಇದರಿಂದಾಗಿ 1500 ಕೋಟಿಗೂ ಹೆಚ್ಚಿನ ವ್ಯಾಪಾರ ವಹಿವಾಟು ಸ್ಥಗಿತವಾಗಿ ಸರ್ಕಾರಕ್ಕೆ 250 ಕೋಟಿ ರೂ ನಷ್ಟು ನಷ್ಟವಾಗಿದೆ ಎಂದು ಹೇಳಲಾಗಿದೆ.
ಶುಕ್ರವಾರ ಕರ್ನಾಟಕ ಬಂದ್ ನಡೆಯಲಿದ್ದು, ವಾಣಿಜ್ಯ ಚಟುವಟಿಕೆಗಳು ಮತ್ತೆ ಸ್ಥಗಿತವಾಗುವುದರಿಂದ ಭಾರಿ ಮೊತ್ತದ ವ್ಯಾಪಾರ ವಹಿವಾಟು ನಡೆಯುವುದಿಲ್ಲ. ಸರ್ಕಾರಕ್ಕೆ ಸುಮಾರು 450 ಕೋಟಿ ರೂ.ನಷ್ಟು ಜಿಎಸ್‌ಟಿ ನಷ್ಟವಾಗಬಹುದು. ವ್ಯಾಪಾರ ವಲಯಕ್ಕೆ 5000 ಕೋಟಿ ಅಧಿಕ ನಷ್ಟವಾಗುವ ಅಂದಾಜಿದೆ.