ಪಣಜಿ: ಗೋವಾದಲ್ಲಿ ಬಿಯರ್ ಬೆಲೆ ದುಬಾರಿಯಾಗಿದ್ದು, ಮದ್ಯಪ್ರಿಯರಿಗೆ ಬೇಸರ ತರಿಸಿದೆ. ಪ್ರವಾಸಿಗರ ಸ್ವರ್ಗವೆಂದೇ ಹೇಳಲಾಗುವ ಗೋವಾದಲ್ಲಿ ಬಿಯರ್ ಬೆಲೆ ಮತ್ತಷ್ಟು ದುಬಾರಿಯಾಗಲಿದೆ.
ಗೋವಾ ಸರ್ಕಾರ ಬಿಯರ್ ಮೇಲಿನ ಅಬಕಾರಿ ಸುಂಕ ಏರಿಕೆ ಮಾಡಿದ್ದು, ಒಂದು ಲೀಟರ್ ಬಿಯರ್ ಮೇಲಿನ ಅಬಕಾರಿ ಸುಂಕ 12 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಬಕಾರಿ ಸುಂಕ ಹೆಚ್ಚಳ ಮಾಡಿರುವುದರಿಂದ ಲೀಟರ್ ಬಿಯರ್ ಬಾಟಲ್ ತೆರಿಗೆ ಪ್ರಮಾಣ 30 ರಿಂದ 42 ರೂ.ಗೆ ಏರಿಕೆಯಾಗಿದ್ದು, ಬಿಯರ್ ದರ 160 ರೂ.ಗೆ ಹೆಚ್ಚಳವಾಗಲಿದೆ. ಇತರೆ ಮದ್ಯದ ಮೇಲಿನ ತೆರಿಗೆ ಹೆಚ್ಚಳ ಮಾಡದೇ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.