ಬೆಂಗಳೂರು: ರೈತ ಶಕ್ತಿ ಯೋಜನೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ರೈತರ ಹೊರೆ ತಪ್ಪಿಸಲು ಬಜೆಟ್ ನಲ್ಲಿ ರೈತ ಶಕ್ತಿ ಯೋಜನೆ ಘೋಷಿಸಿದ್ದು, ಶೀಘ್ರವೇ ಯೋಜನೆಗೆ ಚಾಲನೆ ಸಿಗಲಿದೆ. ಕೃಷಿ ಯಾಂತ್ರೀಕರಣ ಡೀಸೆಲ್ ಮೇಲೆ ಬಹುತೇಕ ಅವಲಂಬಿತವಾಗಿದ್ದು, ಪ್ರತಿ ಎಕರೆಗೆ 250 ರೂ.ಗಳಂತೆ ಗರಿಷ್ಠ 5 ಎಕರೆಗೆ 150 ರೂ. ಸಹಾಯಧನ ನೀಡಲಾಗುವುದು. ರಾಜ್ಯದ ರೈತರಿಗೆ ಕೃಷಿ ಇಲಾಖೆ ಎಲ್ಲಾ ಯೋಜನೆಗಳನ್ನು ಫ್ರೂಟ್ಸ್(FRUITS) ತಂತ್ರಾಂಶದ ಮೂಲಕ ನೋಂದಣಿ ಗುರುತಿನ ಸಂಖ್ಯೆ ಬಳಸಿ ಅದರ ಮೂಲಕವೇ ಅನುಷ್ಠಾನಗೊಳಿಸಲಾಗುತ್ತಿದೆ.
ತಂತ್ರಾಂಶದಲ್ಲಿ ನೋಂದಾಯಿಸಿಕೊಂಡ ರೈತರಿಗೆ ರೈತ ಶಕ್ತಿ ಯೋಜನೆಯ ಸಹಾಯಧನ ನೇರ ನಗದು ವರ್ಗಾವಣೆಯ ಮೂಲಕ ಅವರ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಖಾತೆಗಳಿಗೆ ವರ್ಷಕ್ಕೊಮ್ಮೆ ವರ್ಗಾವಣೆ ಮಾಡಲಾಗುವುದು. ಇದು ಅರ್ಹತೆ ಆಧಾರಿತ ಯೋಜನೆಯಾಗಿದ್ದು ಪ್ರತ್ಯೇಕವಾಗಿ ವೈಯಕ್ತಿಕ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಹೇಳಲಾಗಿದೆ.