ಮೇ 31ರೊಳಗೆ ಬ್ಯಾಂಕ್ ನ ಉಳಿತಾಯ ಖಾತೆಯಿಂದ 12 ರೂಪಾಯಿ ಕಡಿತಗೊಳ್ಳಲಿದೆ. ಆದರೆ ಈ 12 ರೂಪಾಯಿಗಳ ಬದಲು ಗ್ರಾಹಕರಿಗೆ 2 ಲಕ್ಷ ರೂಪಾಯಿ ಲಾಭ ಸಿಗಲಿದೆ. ಈ ಹಣವನ್ನು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯ ಪ್ರೀಮಿಯಂ ಆಗಿ ಕಡಿತಗೊಳಿಸಲಾಗುತ್ತಿದೆ.
ಇದರ ಬಗ್ಗೆ ಬ್ಯಾಂಕ್ ಗಳು ಗ್ರಾಹಕರಿಗೆ ಎಸ್ಎಂಎಸ್ ಮೂಲಕವೂ ಎಚ್ಚರಿಕೆ ನೀಡಲಿವೆ. ಈ ಯೋಜನೆಗೆ ಹೆಸರು ನೋಂದಾಯಿಸಿದವರ ಖಾತೆಯಿಂದ ಮಾತ್ರ ಹಣ ಕಡಿತಗೊಳ್ಳಲಿದೆ. ಅಪಘಾತದಲ್ಲಿ ಸಾವು ಅಥವಾ ವಿಕಲಾಂಗರಾದವರಿಗೆ ವಿಮೆ ಹಣ ಸಿಗಲಿದೆ. ಈಗಾಗಲೇ ಹೆಸರು ನೋಂದಾಯಿಸಿದವರ ಖಾತೆಯಿಂದ ಆಟೋ ಡೆಬಿಟ್ ಸೌಲಭ್ಯದ ಮೂಲಕ 12 ರೂಪಾಯಿಗಳ ಪ್ರೀಮಿಯಂ ಕಡಿತಗೊಳ್ಳಲಿದೆ. ಪ್ರತಿ ವರ್ಷ ಮೇ 25 ರಿಂದ ಮೇ 31 ರವರೆಗೆ ಹಣ ಕಡಿತಗೊಳ್ಳುತ್ತದೆ.
ಯೋಜನೆಗೆ ಸೇರಲು ಬಯಸಿದರೆ ಬ್ಯಾಂಕ್ ಗೆ ತೆರಳಿ ಫಾರ್ಮ್ ಭರ್ತಿ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು. ನೆಟ್ಬ್ಯಾಂಕಿಂಗ್ಗೆ ಲಾಗ್ ಇನ್ ಮಾಡುವ ಮೂಲಕ ಆನ್ಲೈನ್ನಲ್ಲಿ ಪಿಎಂಎಸ್ಬಿವೈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆ ಬಯಸುವವರು 18-70 ವರ್ಷ ವಯಸ್ಸಿನವರಾಗಿರಬೇಕು.