ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕ್ಯಾಲೆಂಡರ್ನ ಪ್ರಕಾರ ದೇಶದ ಬಹುತೇಕ ಬ್ಯಾಂಕುಗಳು ಸೋಮವಾರದಿಂದ ಭಾನುವಾರ( ಆಗಸ್ಟ್ 22)ದ ನಡುವೆ 5 ದಿನಗಳು ಬಂದ್ ಇರಲಿದೆ. ಹೀಗಾಗಿ ಆಯಾ ಬ್ಯಾಂಕುಗಳ ಗ್ರಾಹಕರಿಗೆ ಈ ವಾರ ಬ್ಯಾಂಕಿಂಗ್ ವ್ಯವಹಾರದಲ್ಲಿ ಕೊಂಚ ಅಡಚಣೆ ಉಂಟಾಗಲಿದೆ.
ಆರ್ಬಿಐ ಕ್ಯಾಲೆಂಡರ್ನ ಪ್ರಕಾರ ಆಗಸ್ಟ್ ತಿಂಗಳಲ್ಲಿ ಎರಡನೆ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರವನ್ನೂ ಸೇರಿಸಿ ಒಟ್ಟು 15 ದಿನಗಳು ರಜೆ ಎಂದು ಘೋಷಣೆಯಾಗಿದೆ. ಅಂದಹಾಗೆ ಈ ರಜೆಯು ಆಯಾ ರಾಜ್ಯಗಳಿಗೆ ಬೇರೆ ರೀತಿಯಲ್ಲಿ ಇರಲಿದೆ.
16ನೇ ತಾರೀಖಿನಿಂದ 22ರವರೆಗೆ ನಾಲ್ಕು ಹಬ್ಬದ ರಜೆ ಇರಲಿದೆ. ಆಗಸ್ಟ್ 16ರಂದು ಪಾರ್ಸಿ ಹೊಸ ವರ್ಷಾಚರಣೆ ಅಥವಾ ನಾವ್ರೋಜ್ನ್ನು ಆಚರಣೆ ಮಾಡಲಾಗುತ್ತದೆ. ಹೀಗಾಗಿ ಅಂದು ಬೇಲಾಪುರ, ಮುಂಬೈ ಹಾಗೂ ನಾಗ್ಪುರದಲ್ಲಿ ಬ್ಯಾಂಕುಗಳು ಬಂದ್ ಇತ್ತು. ಅದೇ ರೀತಿ ಗುರುವಾರದಂದು ಮೊಹರಂ ಹಿನ್ನೆಲೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಇರಲಿದೆ.
ಆಗಸ್ಟ್ 16 – ಪಾರ್ಸಿ ಹೊಸ ವರ್ಷಾಚರಣೆ ( ಬೇಲಾಪುರ, ಮುಂಬೈ, ನಾಗ್ಪುರ ಬ್ಯಾಂಕ್ ಸೇವೆ ಬಂದ್)
ಆಗಸ್ಟ್ 19 – ಮೊಹರಂ (ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕ್ ಸೇವೆ ಬಂದ್)
ಆಗಸ್ಟ್ 20 – ಓಣಂ
ಆಗಸ್ಟ್ 21 – ತಿರುಓಣಂ ( ತಿರುವನಂಪುರಂ ಹಾಗೂ ಕೊಚ್ಚಿಯಲ್ಲಿ ಬ್ಯಾಂಕ್ ಸೇವೆ ಬಂದ್)
ಆಗಸ್ಟ್ 22 – ಭಾನುವಾರ ( ವಾರದ ರಜೆ)