ದೇಶದಲ್ಲಿ ಡಿಜಿಟಲ್ ಪಾವತಿಗಳನ್ನು ಉತ್ತೇಜಿಸುವ ಉದ್ದೇಶದಿಂದ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮಾಡುವ ವಹಿವಾಟುಗಳಿಗೆ ಬ್ಯಾಂಕುಗಳು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಸಾಧ್ಯವಿಲ್ಲವೆಂದು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ತಿಳಿಸಿದೆ.
2020 ರ ಜನವರಿ 1 ರಂದು ಅಥವಾ ನಂತರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮಾಡಿದ ಮೇಲೆ ಯಾವುದೇ ವಹಿವಾಟಿನ ಮೇಲೆ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಸಾಧ್ಯವಿಲ್ಲವೆಂದು ತಿಳಿಸಿದೆ.
ಡಿಜಿಟಲ್ ಪಾವತಿಗಾಗಿ ಸಂಗ್ರಹಿತ ಶುಲ್ಕವನ್ನು ಮರುಪಾವತಿಸಲು ಹೇಳಲಾಗಿದೆ. ಕೆಲವು ಬ್ಯಾಂಕುಗಳು ಯುಪಿಐ ವಹಿವಾಟಿಗೆ ಶುಲ್ಕ ಸಂಗ್ರಹಿಸುವುದನ್ನು ಗಮನಿಸಿದ ಸಿಬಿಡಿಟಿ ನಿರ್ದಿಷ್ಟ ಸಂಖ್ಯೆಯ ವಹಿವಾಟುಗಳು ಉಚಿತ ಮತ್ತು ಮಿತಿಯನ್ನು ಮೀರಿದ ಪ್ರತಿಯೊಬ್ಬರಿಗೆ ಬ್ಯಾಂಕುಗಳು ಶುಲ್ಕ ವಿಧಿಸುತ್ತಿರುವ ಬಗ್ಗೆ ಕ್ರಮ ಕೈಗೊಂಡಿದೆ. ಈ ರೀತಿ ಶುಲ್ಕ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಯುಪಿಎ ವಹಿವಾಟಿಗೆ ಬ್ಯಾಂಕುಗಳು ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಸಾಧ್ಯವಿಲ್ಲ ಎಂದು ಸಿಬಿಡಿಟಿ ತಿಳಿಸಿದೆ. ನಿಯಮದ ಪ್ರಕಾರ ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಪಾವತಿ ಮಾಡುವ ಅಥವಾ ಫಲಾನುಭವಿ ಪಾವತಿಸುವ ಪಾವತಿದಾರರ ಮೇಲೆ ಯಾವುದೇ ಬ್ಯಾಂಕು ಅಥವಾ ಸಿಸ್ಟಮ್ ಪ್ರೊವೈಡರ್ ಯಾವುದೇ ಶುಲ್ಕವನ್ನು ವಿಧಿಸುವಂತಿಲ್ಲ ಎಂದು ತಿಳಿಸಲಾಗಿದೆ.