ನವದೆಹಲಿ: ಫೆಬ್ರವರಿ 23-24 ರಂದು ಕೈಗೊಂಡಿದ್ದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ್ದು, ಮಾರ್ಚ್ 28-29 ಕ್ಕೆ ಮುಷ್ಕರ ನಡೆಸಲಾಗುವುದು.
ಕೋವಿಡ್ -19 ರ ಮೂರನೇ ಅಲೆ ಮತ್ತು ರಾಜ್ಯ ವಿಧಾನಸಭಾ ಚುನಾವಣೆಯ ಕಾರಣ ಕಳೆದ ತಿಂಗಳು ಮುಷ್ಕರ ಮುಂದೂಡಲಾಯಿತು. ಕೇಂದ್ರ ಕಾರ್ಮಿಕ ಸಂಘಟನೆಗಳ ಸಂಯೋಜಿತ ವೇದಿಕೆಯು ಸರ್ಕಾರದ ನೀತಿಗಳನ್ನು ಪ್ರತಿಭಟಿಸಲು ನವೆಂಬರ್ 2021 ರಲ್ಲಿ ಎರಡು ದಿನಗಳ ಮುಷ್ಕರ ಘೋಷಿಸಿತು.
ಟ್ರೇಡ್ ಯೂನಿಯನ್‌ಗಳು ಜನವರಿಯಲ್ಲಿ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ, ಸೆಂಟ್ರಲ್ ಟ್ರೇಡ್ ಯೂನಿಯನ್ಸ್ (ಸಿಟಿಯುಗಳು) ಮತ್ತು ಸೆಕ್ಟೋರಲ್ ಫೆಡರೇಶನ್‌ಗಳು/ಸಂಘಗಳ ಜಂಟಿ ವೇದಿಕೆಯ ಆನ್‌ಲೈನ್ ಸಭೆಯು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರವನ್ನು ಮಾರ್ಚ್ 28-29 ರವರೆಗೆ ಮುಂದೂಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಮಾರ್ಚ್ ದಿನಗಳ ರಜಾ ದಿನಗಳ ಪಟ್ಟಿಯಲ್ಲಿ 13 ರಜೆ ಗಳು ಇವೆ. ಈ ರಜೆಗಳಲ್ಲಿ ಕೆಲವು ಆಯಾ ಪ್ರದೇಶಗಳಿಗೆ ಅನುಗುಣವಾಗಿ ಬದಲಾವಣೆಗೊಳಪಟ್ಟಿವೆ. ಈಗ ಮುಷ್ಕರ ಕೂಡ ಇರುವುದರಿಂದ ಮಾರ್ಚ್ ನಲ್ಲಿ ಸುಮಾರು 15 ದಿನ ಬ್ಯಾಂಕ್ ವಹಿವಾಟುಗಳಿಗೆ ತೊಂದರೆಯಾಗಬಹುದೆಂದು ಹೇಳಲಾಗಿದೆ.