alex Certify ಬ್ಯಾಂಕ್ ಗ್ರಾಹಕರೇ ಗಮನಿಸಿ: ಇಂದೂ ಮುಷ್ಕರ, ನಾಳೆ –ನಾಡಿದ್ದು ಮಾತ್ರ ಸೇವೆ; ಮತ್ತೆ 3 ದಿನ ಬ್ಯಾಂಕ್ ರಜೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರೇ ಗಮನಿಸಿ: ಇಂದೂ ಮುಷ್ಕರ, ನಾಳೆ –ನಾಡಿದ್ದು ಮಾತ್ರ ಸೇವೆ; ಮತ್ತೆ 3 ದಿನ ಬ್ಯಾಂಕ್ ರಜೆ

ನವದೆಹಲಿ: ದೇಶಾದ್ಯಂತ ಇಂದೂ ಕೂಡ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಲಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾತ್ರ ಸೇವೆಯಲ್ಲಿ ವ್ಯತ್ಯಯವಾಗುತ್ತದೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬ್ಯಾಂಕ್, ವಿಮೆ, ಅಂಚೆ ಸೇರಿದಂತೆ ವಿವಿಧ ವಲಯದ ನೌಕರರು ಮುಷ್ಕರ ಕೈಗೊಂಡಿದ್ದಾರೆ.

2021 ರ ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಕಾಯ್ದೆಗೆ ವಿರೋಧ, ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಪ್ರತಿಘಟನೆ ಕೈಗೊಳ್ಳಲಾಗಿದೆ.

ಇನ್ನು ಭಾನುವಾರದಿಂದ ಇಂದಿನವರೆಗೆ 3 ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗಿದೆ. ಮಾರ್ಚ್ 30 ಮತ್ತು 31 ರಂದು ಮಾತ್ರ ಬ್ಯಾಂಕುಗಳು ಕಾರ್ಯನಿರ್ವಹಿಸಲಿವೆ. ಏಪ್ರಿಲ್ 1 ರಂದು ಆರ್ಥಿಕ ವರ್ಷಾರಂಭದ ಕಾರಣ ಬ್ಯಾಂಕುಗಳಲ್ಲಿ ಸೇವೆ ಇರುವುದಿಲ್ಲ. ಏಪ್ರಿಲ್ 2 ರಂದು ಯುಗಾದಿ ಹಬ್ಬದ ಪ್ರಯುಕ್ತ ರಜೆ ಇರುತ್ತದೆ. ಏಪ್ರಿಲ್ 3 ರಂದು ಭಾನುವಾರ ರಜೆ ಇದೆ. ಹೀಗಾಗಿ ತಮ್ಮ ಯಾವುದೇ ಬ್ಯಾಂಕಿಂಗ್ ಕೆಲಸ ಕಾರ್ಯಗಳಿದ್ದಲ್ಲಿ ನಾಳೆ ಮತ್ತು ನಾಡಿದ್ದು ಮುಗಿಸಿಕೊಳ್ಳಿ. ಇಲ್ಲವಾದಲ್ಲಿ ನಿಮ್ಮ ಹಣಕಾಸು ಸಂಬಂಧಿತ ಚಟುವಟಿಕೆಗಳಿಗೆ ತೊಂದರೆಯಾದೀತು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...