ನವದೆಹಲಿ: ಬ್ಯಾಂಕಿಂಗ್ ಸೇವೆಯಲ್ಲಿ ಮೂರು ತಿಂಗಳ ಅವಧಿಗೆ ನೀಡಲಾಗಿದ್ದ ವಿನಾಯಿತಿಗಳು ಜೂನ್ 30ಕ್ಕೆ ಅಂತ್ಯವಾಗಿದ್ದು ಬ್ಯಾಂಕ್ ಸೇವೆಯಲ್ಲಿ ಬದಲಾವಣೆಗಳಾಗಿವೆ. ಇಂದಿನಿಂದ ಎಟಿಎಂ ಶುಲ್ಕ, ಉಳಿತಾಯ ಖಾತೆಗೆ ಮಿನಿಮಮ್ ಬ್ಯಾಲೆನ್ಸ್ ದಂಡ ಮೊದಲಾದ ನಿಯಮಗಳು ಜಾರಿಗೆ ಬರಲಿದೆ.
ಉಳಿತಾಯ ಖಾತೆಯಲ್ಲಿ ಕನಿಷ್ಠ ಹಣ ಕಾಯ್ದುಕೊಳ್ಳದಿದ್ದರೆ ದಂಡ ಹಾಕಲಾಗುವುದು. ಎಟಿಎಂ ವ್ಯವಹಾರಗಳಿಗೆ ಶುಲ್ಕ ವಿಧಿಸಲಿದ್ದು, ವ್ಯವಹಾರಗಳ ಕನಿಷ್ಠ ಮಿತಿ ದಾಟಿದರೆ ದಂಡ ವಿಧಿಸಲಾಗುವುದು.
ಜೂನ್ 30 ರ ನಂತರ ಬ್ಯಾಂಕಿಂಗ್ ವಹಿವಾಟುಗಳಿಗೆ ಮೂರು ತಿಂಗಳ ಹಿಂದಿನ ನಿಯಮಗಳು ಅನ್ವಯವಾಗಲಿದೆ. ಇನ್ನು ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕುಗಳು ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾಗಿರುವುದರಿಂದ ಬ್ಯಾಂಕ್ ಆಫ್ ಬರೋಡಾ ಖಾತೆದಾರರು ತಮ್ಮ ಖಾತೆಗಳನ್ನು ನವೀಕರಿಸಬೇಕು. ಇಲ್ಲದಿದ್ದರೆ ಜುಲೈ 1ರಿಂದ ಸ್ಥಗಿತವಾಗಲಿದೆ. ನವೀಕರಣದ ನಂತರ ಸಕ್ರಿಯವಾಗಲಿದ್ದು ಆಧಾರ್ ಕಾರ್ಡ್ ಮೊದಲಾದ ದಾಖಲೆ ಸಲ್ಲಿಸಿ ನವೀಕರಿಸಬಹುದಾಗಿದೆ.
ಕೊರೋನಾ ಬಿಕ್ಕಟ್ಟಿನ ಕಾರಣದಿಂದ ಏಪ್ರಿಲ್, ಮೇ ಮತ್ತು ಜೂನ್ ತಿಂಗಳಲ್ಲಿ ಗ್ರಾಹಕರಿಗೆ ಅನುಕೂಲವಾಗುವಂತೆ ಬ್ಯಾಂಕಿಂಗ್ ಸೇವೆಗಳಲ್ಲಿ ವಿನಾಯಿತಿ ನೀಡಲಾಗಿತ್ತು. ಶುಲ್ಕ ಮತ್ತು ದಂಡ ನಿಯಮಗಳು ಇಂದಿನಿಂದ ಜಾರಿಯಲ್ಲಿರುತ್ತದೆ ಎಂದು ಹೇಳಲಾಗಿದೆ. ಮೊದಲೇ ಸಂಕಷ್ಟದಲ್ಲಿರುವ ಜನ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗಿದ್ದು, ದಂಡ ಹಾಕಿದರೆ ಮತ್ತೆ ಹೊರೆಯಾಗಲಿದೆ ಎನ್ನಲಾಗಿದೆ.