ಬೆಂಗಳೂರು: ಇತ್ತೀಚೆಗೆ ಆರ್.ಬಿ.ಐ. ರೆಪೋ ದರವನ್ನು ಶೇಕಡ 0.4 ರಷ್ಟು ಹೆಚ್ಚಳ ಮಾಡಿದ್ದು, ಇದರ ಬೆನ್ನಲ್ಲೇ ಕೆಲವು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರ ಹೆಚ್ಚಳ ಮಾಡಿವೆ. ಮತ್ತಷ್ಟು ಬ್ಯಾಂಕುಗಳು ಕೂಡ ಸಾಲದ ಮೇಲಿನ ಬಡ್ಡಿ ದರ ಹೆಚ್ಚಳಕ್ಕೆ ಮುಂದಾಗಿದ್ದು, ಸಾಲಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೆಪೋ ದರ ಶೇಕಡ 2 ರಷ್ಟು ಜಿಗಿಯುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಂದಾಜು ಮಾಡಿದ್ದಾರೆ. ಇದರಿಂದಾಗಿ ವಾಹನ, ಗೃಹ ಮತ್ತು ಇತರೆ ಸಾಲಗಳ ಬಡ್ಡಿದರ ಏರಿಕೆ ಕಾಣಲಿದೆ. ಇಎಂಐ ಹೊರೆಯಾಗಿಪರಿಣಮಿಸಲಿದೆ ಎಂದು ಹೇಳಲಾಗಿದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆಯಾದ ಪರಿಣಾಮ ದೈನಂದಿನ ಸರಕು, ಸೇವೆಗಳ ದರ ಕೂಡ ಏರಿಕೆ ಕಂಡಿದ್ದು, ವಿದ್ಯುತ್, ಸಿಮೆಂಟ್, ಉಕ್ಕು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ಕಂಡಿದೆ. ವಾಹನ, ಮನೆ ಸಾಲ ಪಡೆದವರು ಮತ್ತು ಪಡೆಯುವವರು ಬಡ್ಡಿದರದ ಬರೆ ಹಾಕಿಸಿಕೊಳ್ಳುವಂತಾಗಿದೆ.
ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿ ದರ ಏರಿಕೆಯಾಗಿ ಸಾಲಗಾರರಿಗೆ ಹೊರೆಯಾಗಲಿದೆ. ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ರೆಪೋ ದರ ಒಂದೂವರೆ ಪರ್ಸೆಂಟ್ ನಷ್ಟವಾದರೂ ಹೆಚ್ಚಳವಾಗಲಿದೆ ಎನ್ನಲಾಗಿದೆ.