alex Certify ಗ್ರಾಹಕರಿಗೆ ಗುಡ್ ನ್ಯೂಸ್: ಬ್ಯಾಂಕ್ ಮುಚ್ಚಿದರೆ 90 ದಿನದಲ್ಲಿ 5 ಲಕ್ಷ ರೂ. ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರಿಗೆ ಗುಡ್ ನ್ಯೂಸ್: ಬ್ಯಾಂಕ್ ಮುಚ್ಚಿದರೆ 90 ದಿನದಲ್ಲಿ 5 ಲಕ್ಷ ರೂ. ಪರಿಹಾರ

ನವದೆಹಲಿ: ಬ್ಯಾಂಕ್ ಗ್ರಾಹಕರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಠೇವಣಿ ಹಿತ ಕಾಯುವ ವಿಧೇಯಕಕ್ಕೆ ಹಸಿರು ನಿಶಾನೆ ತೋರಿದೆ.

ಬ್ಯಾಂಕ್ ಗಳು ನಷ್ಟದ ಸುಳಿಗೆ ಸಿಲುಕಿ ಮೊರಾಟೋರಿಯಂಗೆ ಒಳಪಟ್ಟ ಸಂದರ್ಭದಲ್ಲಿ ಗ್ರಾಹಕರಿಗೆ 90 ದಿನದೊಳಗೆ ನಷ್ಟ ಪರಿಹಾರವಾಗಿ 5 ಲಕ್ಷ ರೂಪಾಯಿವರೆಗೂ ವಿಮೆ ಪರಿಹಾರ ಹಣ ಸಿಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗುವುದು.

ಯಾವುದೇ ಬ್ಯಾಂಕುಗಳು ಸಂಕಷ್ಟಕ್ಕೆ ಸಿಲುಕಿ ಆರ್.ಬಿ.ಐ.ನಿಂದ ವಹಿವಾಟು ನಿಷೇಧಕ್ಕೊಳಪಟ್ಟಂತಹ ಸಂದರ್ಭದಲ್ಲಿ ಬ್ಯಾಂಕ್ ಗ್ರಾಹಕರಿಗೆ ಆರ್ಥಿಕ ತೊಂದರೆ ಉಂಟಾಗದಂತೆ ಕಾಪಾಡಲು ಇದರಿಂದ ಅನುಕೂಲವಾಗುತ್ತದೆ. ಸಂಕಷ್ಟದಿಂದ ಬ್ಯಾಂಕ್ ಗಳು ಮುಚ್ಚಿದರೆ ಠೇವಣಿದಾರರಿಗೆ 5 ಲಕ್ಷ ರೂಪಾಯಿವರೆಗೆ 90 ದಿನದೊಳಗೆ ವಿಮೆ ನೀಡಲಾಗುವುದು. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಠೇವಣಿ ತಿದ್ದುಪಡಿ ಕಾಯ್ದೆಗೆ ಅನುಮೋದನೆ ನೀಡಲಾಗಿದ್ದು, ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಹೇಳಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...