alex Certify ಹಬ್ಬಗಳ ಸೀಸನ್ ಗೆ ವಿಶೇಷ ಕೊಡುಗೆ: ವಿಶೇಷ ರಿಯಾಯಿತಿಯಲ್ಲಿ ಕಡಿಮೆ ಬಡ್ಡಿಗೆ BOB ಸಾಲ ಸೌಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಬ್ಬಗಳ ಸೀಸನ್ ಗೆ ವಿಶೇಷ ಕೊಡುಗೆ: ವಿಶೇಷ ರಿಯಾಯಿತಿಯಲ್ಲಿ ಕಡಿಮೆ ಬಡ್ಡಿಗೆ BOB ಸಾಲ ಸೌಲಭ್ಯ

ಬೆಂಗಳೂರು: ಬ್ಯಾಂಕ್ ಆಫ್ ಬರೋಡಾದಿಂದ ಗ್ರಾಹಕರಿಗೆ ವಿಶೇಷ ಸಾಲ ಸೌಲಭ್ಯ ಕಲ್ಪಿಸಲಾಗಿದೆ. ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿಯೊಂದಿಗೆ ‘ಬ್ಯಾಂಕ್ ಆಫ್ ಬರೋಡಾ ಕೆ ಸಂಗ್ ತ್ಯೋಹಾರ್ ಕಿ ಉಮಂಗ್’ ಕೊಡುಗೆ ಘೋಷಿಸಲಾಗಿದೆ.

ಮನೆ, ಕಾರ್, ವೈಯಕ್ತಿಕ ಹಾಗೂ ಶಿಕ್ಷಣ ಸಾಲಗಳ ಮೇಲಿನ ಆಕರ್ಷಕ ಬಡ್ಡಿ ದರಗಳು, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಮೇಲೆ ಹಬ್ಬದ ಕೊಡುಗೆಗಳನ್ನು ನೀಡಲಾಗಿದೆ.

ಶೂನ್ಯ ಸಂಸ್ಕರಣಾ ಶುಲ್ಕದೊಂದಿಗೆ ವಾರ್ಷಿಕ ಶೇಕಡ 8.4 ರಷ್ಟು ಬಡ್ಡಿ ದರದಲ್ಲಿ ಗೃಹ ಸಾಲ ನೀಡಲಾಗುತ್ತದೆ. ಶೇಕಡ 8.70 ಬಡ್ಡಿಗೆ ಕಾರ್ ಸಾಲ, ಶೇಕಡ 8.55 ಕ್ಕೆ ಶಿಕ್ಷಣ ಸಾಲ, ಶೇಕಡ 10.10 ಬಡ್ಡಿಗೆ ವೈಯಕ್ತಿಕ ಸಾಲ ಸೌಲಭ್ಯ ಇರಲಿದೆ. ಅಲ್ಲದೇ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಕೊಡುಗೆಗಳ ಮೇಲೆ ರಿಯಾಯಿತಿ ಇರಲಿದೆ. ಡಿಸೆಂಬರ್ 31ರವರೆಗೆ ‘ಬ್ಯಾಂಕ್ ಆಫ್ ಬರೋಡಾ ಕೆ ಸಂಗ್ ತ್ಯೋಹಾರ್ ಕಿ ಉಮಂಗ್’ ನಡೆಯಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...